ಅಮೆರಿಕಾದಲ್ಲಿ ಪ್ರಧಾನಿ ಮೋದಿಗೆ ಕನ್ನಡಿಗನ ಆತಿಥ್ಯ
ಬೆಂಗಳೂರು, ಸೆ 27: ಅಮೆರಿಕ ಪ್ರವಾಸದ ಭಾಗವಾಗಿ ವಾಷಿಂಗ್ಟನ್‌ನಲ್ಲಿ 3 ದಿನಗಳು ಕಳೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನ್ನಡಿಗರೊಬ್ಬರು ಆತಿಥ್ಯ ನೀಡಿದ್ದಾರೆ. ಮೋದಿ ಅವರಿಗೆ ಭೋಜನ ವ್ಯವಸ್ಥೆಯನ್ನು ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಆನಂದ ಪೂಜಾರಿ ಕೈಗೊಂಡಿದ್ದರು. ಆನಂದ್ ಕಳೆದ 35 ವರ್ಷಗಳಿಂದ ವಾಷಿಂಗ್ಟನ್ ಡಿಸಿಯಲ್ಲಿ ವಾಸಿಸುತ್ತಿದ್ದಾರೆ. ಪತ್ನಿ ಸುನೀತಾ ಅವರೊಂದಿಗೆ 25 ವರ್ಷಗಳಿಂದ ವುಡ್‌ಲ್ಯಾಂಡ್ ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ. ಭಾರತದಿಂದ ಅಮೆರಿಕಾಗೆ ಬರುವ ಪ್ರಮುಖರಿಗೆ ಅವರು ಕಳೆದ ಕೆಲವು ವರ್ಷಗಳಿಂದ ಅವರು ಆತಿಥ್ಯ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರಿಗೆ ಆನಂದ ಪೂಜಾರಿ ನೇತೃತ್ವದ ತಂಡ ಮೂರನೇ ಬಾರಿಗೆ ಪ್ರಧಾನಿಗೆ ಆತಿಥ್ಯ ಕಲ್ಪಿಸಿದೆ.
ಅಮೆರಿಕದಲ್ಲಿ ಮೋದಿ ಅವರನ್ನು ಆನಂದ್ ಪೂಜಾರಿ ದಂಪತಿಗಳು ನಾಲ್ಕು ಬಾರಿ ಭೇಟಿಯಾಗಿದ್ದಾಗಿ ಅವರು ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೋದಿ ಅಮೆರಿಕದಲ್ಲಿದ್ದರೂ ಭಾರತೀಯ ಶೈಲಿಯ ಅಡುಗೆಗಳಿಗೆ ಆದ್ಯತೆ ನೀಡುತ್ತಾರೆ, ವಿಶೇಷವಾಗಿ ದಕ್ಷಿಣ ಭಾರತೀಯ ರುಚಿಗಳಿಗೆ ಆಸಕ್ತಿ ತೋರಿಸುತ್ತಾರೆ. ಅಮೆರಿಕಾದಲ್ಲಿ ಕೂಡ ಸಂಪೂರ್ಣ ಸಸ್ಯಾಹಾರಿ ಊಟಕ್ಕೆ ಆದ್ಯತೆ ನೀಡಿದ್ದಾರೆ. ಆನಂದ ಪೂಜಾರಿ ಅವರು ಆಗಾಗ್ಗೆ ತಾಯ್ನಾಡು ಕರ್ನಾಟಕಕ್ಕೆ ತೆರಳುತ್ತಿರುವುದಾಗಿ, ಕೋವಿಡ್‌ನಿಂದಾಗಿ ಇತ್ತೀಚೆಗೆ ತೆರಳಲು ಸಾಧ್ಯವಾಗಿಲ್ಲ ಎಂದು ಆನಂದ ಪೂಜಾರಿ ಹೇಳಿದ್ದಾರೆ.