ಕ್ರೀಡೆ

ಆತ್ಮಹತ್ಯೆ ಮಾಡಿಕೊಂಡ ಪಾಕಿಸ್ತಾನ್ ಸೂಪರ್ ಲೀಗ್ನ ಮುಲ್ತಾನ್ ಸುಲ್ತಾನ್ಸ್ನ ತಂಡದ ಮಾಲೀಕ

ಆತ್ಮಹತ್ಯೆ ಮಾಡಿಕೊಂಡ ಪಾಕಿಸ್ತಾನ್ ಸೂಪರ್ ಲೀಗ್ನ ಮುಲ್ತಾನ್ ಸುಲ್ತಾನ್ಸ್ನ ತಂಡದ ಮಾಲೀಕ

ಲಾಹೋರ್ 06: ಪಾಕಿಸ್ತಾನ್ ಸೂಪರ್ ಲೀಗ್ (ಕಖಐ) ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್ನ ಮಾಲೀಕ ಅಲಂಗೀರ್ ತರೀನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 63 ವರ್ಷದ ತರೀನ್ ಲಾಹೋರ್ನ ಗುಲ್ಬಗರ್್ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಡೇತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಗುಲ್ಬಗರ್್ನಲ್ಲಿರುವ ತನ್ನ ಮನೆಯಲ್ಲಿ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಅಲಂಗೀರ್ ತರೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಲಾಹೋರ್ ಪೊಲೀಸರು ತಿಳಿಸಿದ್ದಾರೆ. ಡೇತ್ನೋಟ್ನಲ್ಲಿ ಆತ್ಮಹತ್ಯೆಯ ಕಾರಣವನ್ನು ಅವರು ತಿಳಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಈ ನಿಧರ್ಾರ ತೆಗೆದುಕೊಂಡಿದ್ದಾರಂತೆ. ತರೀನ್ ಸಂಬಂಧಿಕರ ಪ್ರಕಾರ, ಸ್ನೇಹಿತರು ಮತ್ತು ಆಪ್ತರೊಂದಿಗೆ ಅವರು ತಮ್ಮ ರೋಗದ ಬಗ್ಗೆ ಹೇಳಿರಲಿಲ್ಲ. ಡಿಸೆಂಬರ್ನಲ್ಲಿ ಮದುವೆಯಾಗಬೇಕಿದ್ದ ಅವರು ಅನಾರೋಗ್ಯದ ಕಾರಣ ಸೂಸೈಡ್ ಮಾಡಿಕೊಂಡಿದ್ದಾರೆ. ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾಥರ್ಿಯಾಗಿರುವ ತರೀನ್ ಪಾಕಿಸ್ತಾನದ ದಕ್ಷಿಣ ಪಂಜಾಬ್ನಲ್ಲಿ ಪ್ರಮುಖ ಉದ್ಯಮಿಯಾಗಿ ಹೆಸರು ಗಳಿಸಿದ್ದರು.   

ಸುಮಾರು 7 ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ ತರೀನ್ ಬೆಳಕಿಗೆ ಬಂದಿದ್ದರು. 2016ರಲ್ಲಿ ಅವರು 1 ದಿನ ಜೈಲಿನಲ್ಲಿ ಕಳೆದಿದ್ದರು. ತರೀನ್ ಕ್ರಿಕೆಟ್ನಲ್ಲಿ ಆಸಕ್ತಿ ಹೊಂದಿದ್ದರು. ಹೀಗಾಗಿಯೇ ಅವರು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ತಂಡವನ್ನು ಖರೀದಿಸಿದ್ದರು.

ತರೀನ್ ಒಡೆತನದ ಮುಲ್ತಾನ್ ಸುಲ್ತಾನ್ಸ್ ತಂಡವು 2021ರಲ್ಲಿ ಮುಲ್ತಾನ್ ಸುಲ್ತಾನ್ ತಂಡವು ಫೈನಲ್ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡವನ್ನು ಸೋಲಿಸಿ ಮೊದಲ ಬಾರಿ ಪಿಎಸ್ಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. 

 

ಸುದ್ದಿ ಓದಿ