ಇಕ್ಕಟ್ಟಿನಲ್ಲಿ ಪಾಕ್ ಪ್ರಧಾನಿ ಕುರ್ಚಿ: ಅತೃಪ್ತರಿಗೆ 7 ದಿನದ ನೋಟಿಸ್!
ಇಸ್ಲಾಮಾಬಾದ್: ಮಾರ್ಚ್ 20: ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದಂತೆ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಸುಮಾರು 20ಕ್ಕೂ ಹೆಚ್ಚು ಸಂಸದರು ಬಂಡಾಯ ಎದ್ದಿದ್ದಾರೆ.
ಈ ಮಧ್ಯೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವು ಶನಿವಾರ ಪಕ್ಷಾಂತರ ಆರೋಪದ ಮೇಲೆ ತನ್ನ ಅತೃಪ್ತ ಸಂಸದರಿಗೆ ಶೋಕಾಸ್ ನೋಟಿಸ್ ನೀಡಿದೆ. “ನಿಮ್ಮನ್ನು ಪಕ್ಷಾಂತರಿ ಎಂದು ಏಕೆ ಘೋಷಿಸಬಾರದು? ಮತ್ತು ರಾಷ್ಟ್ರೀಯ ಅಸೆಂಬ್ಲಿ ಸದಸ್ಯತ್ವದಿಂದ ಅನರ್ಹಗೊಳಿಸಬಾರದು ಎಂಬ ಬಗ್ಗೆ ಮಾರ್ಚ್ 26 ರೊಳಗೆ ವಿವರಣೆ ನೀಡುವಂತೆ” ಸೂಚಿಸಲಾಗಿದೆ. ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದಂತೆ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಸುಮಾರು 20ಕ್ಕೂ ಹೆಚ್ಚು ಸಂಸದರು ಬಂಡಾಯ ಎದ್ದಿದ್ದಾರೆ. ಆದರೆ ವಿರೋಧ ಪಕ್ಷಗಳು ಸಂಸದರ ಕುದುರೆ ವ್ಯಾಪಾರ ನಡೆಸುತ್ತಿವೆ ಎಂದು ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಆರೋಪಿಸಿದೆ.
ಸಿಂಧ್‌ನಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸರ್ಕಾರವಿದ್ದು, ಇಸ್ಲಾಮಾಬಾದ್‌ನ ಸಿಂಧ್ ಹೌಸ್‌ನಲ್ಲಿ ಬಂಡಾಯ ಸಂಸದರು ತಂಗಿದ್ದಾರೆ. ಡಾನ್ ಪತ್ರಿಕೆಯ ಸುದ್ದಿ ಪ್ರಕಾರ, ನೋಟಿಸ್ ಪಡೆದವರಲ್ಲಿ ಸಂಸದ ಮೊಹಮ್ಮದ್ ಅಫ್ಜಲ್ ಖಾನ್ ದಾಂಡ್ಲಾ ಕೂಡ ಇದ್ದಾರೆ. “ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕ ಪ್ರಸಾರ ಮತ್ತು ವೀಡಿಯೊ ಪ್ರಸಾರದ ಮೂಲಕ, ನೀವು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಸಂಸದ ಸ್ಥಾನವನ್ನು ತೊರೆದು ವಿರೋಧ ಪಕ್ಷಗಳಿಗೆ ಸೇರಿದ್ದೀರಿ ಎಂದು ತಿಳಿದುಬಂದಿದೆ” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ, ಮಾರ್ಚ್ 8, 2022 ರಂದು ಪಾಕಿಸ್ತಾನದ ಪ್ರಧಾನಿ ವಿರುದ್ಧದ ಯಾರು ಅವಿಶ್ವಾಸ ಮಂಡಿಸುವಲ್ಲಿ ದಾಂಡ್ಲಾ ಪ್ರಮುಖರಾಗಿದ್ದರು.