ಅಂತರರಾಷ್ಟ್ರೀಯ

ಅಮೆರಿಕಾದ 10 ರಾಜ್ಯಗಳಲ್ಲಿ ಒಮಿಕ್ರಾನ್‌ ರೂಪಾಂತರಿ ದೃಢ

ಅಮೆರಿಕಾದ  10  ರಾಜ್ಯಗಳಲ್ಲಿ ಒಮಿಕ್ರಾನ್‌ ರೂಪಾಂತರಿ  ದೃಢ

ವಾಷಿಂಗ್ಟನ್, ಡಿ  4:   ಅಮೆರಿಕಾದಲ್ಲಿ     ಹೆಚ್ಚುವರಿಯಾಗಿ   ಐದು  ರಾಜ್ಯಗಳಲ್ಲಿ  ಕೊರೊನಾ  ವೈರಸ್   ಒಮಿಕ್ರಾನ್   ರೂಪಾಂತರಿ  ಪ್ರಕರಣಗಳು  ವರದಿಯಾಗಿವೆ   ಎಂದು  ಆರೋಗ್ಯ  ಅಧಿಕಾರಿಗಳು   ದೃಢಪಡಿಸಿದ್ದು,   ಇದರಿಂದ     ಒಮಿಕ್ರಾನ್‌   ದೃಢಪಟ್ಟ      ರಾಜ್ಯಗಳ  ಸಂಖ್ಯೆ  10ಕ್ಕೆ  ತಲುಪಿದೆ 

ಆರೋಗ್ಯ  ಅಧಿಕಾರಿಗಳ ಪ್ರಕಾರ    ಮೇರಿಲ್ಯಾಂಡ್, ನೆಬ್ರಸ್ಕಾ,  ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ  ಹಾಗೂ ಉತಾಹ್ ರಾಜ್ಯಗಳಲ್ಲಿ   ಓಮಿಕ್ರಾನ್ ರೂಪಾಂತರಿ  ಪ್ರಕರಣಗಳು   ಶುಕ್ರವಾರ  ದೃಢಪಟ್ಟಿವೆ.   ವಾರದ ಆರಂಭದಲ್ಲಿ ಕ್ಯಾಲಿಫೋರ್ನಿಯಾ, ಕೊಲೊರಾಡೋ, ಹವಾಯಿ, ಮಿನ್ನೇಸೋಟ  ಹಾಗೂ ನ್ಯೂಯಾರ್ಕ್‌ನಲ್ಲಿ  ಪ್ರಕರಣಗಳು ವರದಿಯಾಗಿದ್ದವು.

ದಕ್ಷಿಣ ಆಫ್ರಿಕಾದಲ್ಲಿ   ಮೊದಲು  ಪತ್ತೆಯಾದ ಓಮಿಕ್ರಾನ್,    ಕಳವಳಕಾರಿ  ರೂಪಾಂತರಿ ಎಂದು ಪರಿಗಣಿಸಿದ ನಂತರ     ಅಮೆರಿಕಾ ಹಾಗೂ    ಪಾಶ್ಚಿಮಾತ್ಯ ದೇಶಗಳು  ಹೊಸ ಪ್ರಯಾಣ ನಿರ್ಬಂಧಗಳು  ಹಾಗೂ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು  ಜಾರಿಗೊಳಿಸಿದೆ.

ಓಮಿಕ್ರಾನ್  ರೂಪಾಂತರಿ    ಕಳವಳಕ್ಕೆ ಕಾರಣವಾಗಿದೆ,  ಆದರೆ  ಇದು  ಅಪಾಯದ  ಸ್ಥಿತಿ  ಅಲ್ಲ ಎಂದು ಬೈಡೆನ್ ಆಡಳಿತ ಹೇಳಿದೆ. ಶ್ವೇತ ಭವನದ  ಕೋವಿಡ್‌   ತಜ್ಞರು   ಹಿಂದಿನ ರೂಪಾಂತರಗಳಿಗಿಂತ ಓಮಿಕ್ರಾನ್‌  ತಳಿ  ನಿಭಾಯಿಸಲು  ಅಮೆರಿಕಾ   ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.    ಸಂಪೂರ್ಣವಾಗಿ ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಸೋಂಕುಗಳು ಪತ್ತೆಯಾಗಿವೆ ಎಂದು  ದಕ್ಷಿಣ ಆಫ್ರಿಕಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಸುದ್ದಿ ಓದಿ