4ರಂದು ಓಕಳಿ ಕಾರ್ಯಕ್ರಮ: ಅನಿಷ್ಟ ಪದ್ಧತಿ ನಿಲ್ಲಿಸಲು ಸೂಚನೆ
Okali program on the 4th: Instructions to stop the evil practice
ಸಮೀರವಾಡಿ 03: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪೂರ ಗ್ರಾಮದಲ್ಲಿ ದಿ. 4ರಂದು ಸಾಯಂಕಾಲ 4ಗಂಟೆಗೆ ಓಕಳಿ ಕಾರ್ಯಕ್ರಮ ಜರುಗಲಿದೆ. ಓಕಳಿ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರ ಗೌರವಕ್ಕೆ ಧಕ್ಕೆತರುವ ಅನಿಷ್ಟ ಪದ್ಧತಿ ಜಾರಿಯಲ್ಲಿತ್ತು. ಇದನ್ನು ತಡೆಗಟ್ಟುವಂತೆ ಜಮಖಂಡಿ ಉಪವಿಭಾಗಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು (ಗ್ರೇಡ್-2) ಸಮಾಜ ಕಲ್ಯಾಣ ಇಲಾಖೆ ಮುಧೋಳ ಅವರು ಸೈದಾಪೂರ ಗಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ನೋಟಿಸ ಕಳಿಸಿದ ಹಿನ್ನೆಲೆಯಲ್ಲಿ ದಿ. 3ರಂದು ಸೈದಾಪೂರ ಗಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಚಿನ್ನಪ್ಪ ಹಿರೇಕುರುಬರ ಗ್ರಾಮದ ಎಲ್ಲ ಸಮುದಾಯದ ಮುಖಂಡರ ಸಭೆ ಕರೆದು ಈ ಪದ್ಧತಿಯನ್ನು ಮುಂದುವರೆಸದಂತೆ ಸೂಚಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಹಿಳೆಯರ ಗೌರವಕ್ಕೆ ಧಕ್ಕೆತರುವ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಿ ಮಹಿಳೆಯರನ್ನು ಬಳಸಿಕೊಂಡು ಓಕಳಿ ಆಡದಂತೆ ಜಾಗೃತಿ ಮೂಡಿಸಲು ಕಾನೂನು ಪ್ರಕಾರ ತಪ್ಪು ಅರ್ಜಿ ಸ್ವೀಕೃತವಾಗಿದ್ದು ಅನಿಷ್ಠ ಪದ್ದತಿಯನ್ನು ತಡೆಗಟ್ಟುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.ಅನಿಷ್ಟ ಪದ್ಧತಿ ಗ್ರಾಮದಲ್ಲಿ ಆಚರಣೆ ಆಗದಂತೆ ಮುಂಜಾಗ್ರತೆಯಾಗಿ ಗ್ರಾಮದ ಹಿರಿಯರು ಮುಖಂಡರನ್ನ ಗ್ರಾಮ ಪಂಚಾಯತ ಕಚೇರಿಯಲ್ಲಿ ಸಭೆಗೆ ಆಹ್ವಾನಿಸಿ ಗ್ರಾಮದಲ್ಲಿ ಇಂತಹ ಅನಿಷ್ಟ ಪದ್ಧತಿ ಕಾರ್ಯಕ್ರಮ ಆಚರಣೆ ಮಾಡಬಾರದು ಎಂದು ಗಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಚಿನ್ನಪ್ಪ ಹಿರೇಕುರುಬರ ಮನವರಿಕೆ ಮಾಡಿದರು. ಸಭೆಯಲ್ಲಿ ಹಾಜರಾದ ಗ್ರಾಮದ ಹಿರಿಯರು ಮತ್ತು ಮುಖಂಡರು ಕಾನೂನು ಪ್ರಕಾರವಾಗಿ ನಾವು ಕಾರ್ಯಕ್ರಮ ನಿರ್ವಹಿಸುತ್ತೇವೆ. ಈ ಅನಿಷ್ಟ ಪದ್ಧತಿ ತಡೆಗೆ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 