ಅಂತರರಾಷ್ಟ್ರೀಯ

ನೈಜೀರಿಯಾದಲ್ಲಿ ತೈಲ ಸಂಸ್ಕರಣಾ ಘಟಕ ಸ್ಫೋಟ; 100 ಮಂದಿ ಸಾವು!

ನೈಜೀರಿಯಾದಲ್ಲಿ ತೈಲ ಸಂಸ್ಕರಣಾ ಘಟಕ ಸ್ಫೋಟ; 100 ಮಂದಿ ಸಾವು!

ಪೋರ್ಟ್ ಹಾರ್ಕೋರ್ಟ್ (ನೈಜೀರಿಯಾ) ಏಪ್ರಿಲ್ 24: ದಕ್ಷಿಣ ನೈಜೀರಿಯಾದಲ್ಲಿ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ನೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ತಡರಾತ್ರಿ ಸ್ಫೋಟ ಸಂಭವಿಸಿರುವ ಬಗ್ಗೆ ಪೊಲೀಸರು ಖಚಿತಪಡಿಸಿದ್ದಾರೆ. ಆದರೆ ಸಾವುನೋವುಗಳ ಬಗ್ಗೆ ನಿಖರ ವಿವರಗಳನ್ನು ನೀಡಿಲ್ಲ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಸ್ಫೋಟದಲ್ಲಿ 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದು ಆಫ್ರಿಕಾದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕ ನೈಜೀರಿಯಾದಲ್ಲಿ ಇತ್ತೀಚಿಗೆ ಸಂಭವಿಸಿರುವ ಅತಿ ದೊಡ್ಡ ಅನಾಹುತವಾಗಿದೆ.

ಶುಕ್ರವಾರ ತಡರಾತ್ರಿ ಅಕ್ರಮ ಸಂಸ್ಕರಣಾ ಘಟಕದಲ್ಲಿ ವ್ಯಾಪಾರಕ್ಕಾಗಿ ತೈಲ ಘಟಕದ ನಿರ್ವಾಹಕರು ಮತ್ತು ಗ್ರಾಹಕರು ಒಟ್ಟುಗೂಡಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಕಚ್ಚಾ ತೈಲ ಸಂಸ್ಕರಣೆಯು ದಕ್ಷಿಣ ನೈಜೀರಿಯಾದಲ್ಲಿ ಸಾಮಾನ್ಯವಾಗಿದೆ. ಅಲ್ಲಿ ತೈಲ ಕಳ್ಳರು ಕಚ್ಚಾ ತೈಲವನ್ನು ಕದಿಯಲು ಪೈಪ್‌ಲೈನ್‌ಗಳನ್ನು ಹಾಳುಮಾಡುತ್ತಾರೆ. ಅದನ್ನು ಅವರು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡಲು ಸಂಸ್ಕರಿಸುತ್ತಾರೆ.

ದೇಶದ ತೈಲ ಸಂಪನ್ಮೂಲಗಳನ್ನು ಕದಿಯುವುದನ್ನು ತಡೆಯುವ ಕ್ರಮಗಳ ಭಾಗವಾಗಿ ನೈಜೀರಿಯಾ ಸರ್ಕಾರವು ಅಕ್ರಮ ಸಂಸ್ಕರಣಾಗಾರಗಳ ಮೇಲೆ ದಾಳಿ ಮಾಡಲು ಮತ್ತು ನಾಶಮಾಡಲು ಮಿಲಿಟರಿಯನ್ನು ನಿಯೋಜಿಸಿದೆ. ಅದಾಗ್ಯೂ ಅಕ್ರಮವಾಗಿ ತೈಲ ಸಂಸ್ಕರಣೆ ಎಗ್ಗಿಲದೇ ನಡೀತಿದೆ.

ಸುದ್ದಿ ಓದಿ