ಆತಂಕಕಾರಿ ರೂಪಾಂತರಿ ‘ಓಮಿಕ್ರಾನ್’ .. WHO ಮಹತ್ವದ ಹೇಳಿಕೆ
ಜಿನೀವಾ, ನ 27: ವಿಶ್ವದಲ್ಲಿ ತಲ್ಲಣ ಮೂಡಿಸುತ್ತಿರುವ ಬಿ. 1.1. 529 ಕೊರೊನಾ ರೂಪಾಂತರಿ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹತ್ವದ ಹೇಳಿಕೆ ನೀಡಿದೆ. ಹೊಸ ತಳಿ 'ಆತಂಕಕಾರಿ ರೂಪಾಂತರಿ' ಎಂದು ಗುರುತಿಸಿ, ಅದಕ್ಕೆ ಓಮಿಕ್ರಾನ್ ಎಂದು ನಾಮಕರಣಗೊಳಿಸಿದೆ. ಓಮಿಕ್ರಾನ್ ಎಂಬುದು ಗ್ರೀಕ್ ಹೆಸರು. ಹೊಸ ರೂಪಾಂತರಿಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದು W H O ಸೂಚಿಸಿರುವುದು ಕಳವಳ ಉಂಟುಮಾಡಿದೆ. ಸಾಮಾನ್ಯವಾಗಿ, ವೃರಸ್ ಪ್ರಸರಣ ತೀವ್ರವಾಗಿದ್ದು, ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಸಂದರ್ಭಗಳಲ್ಲಿ ಅದನ್ನು ಆತಂಕಕಾರಿ ರೂಪಾಂತರಿ ಪರಿಗಣಿಸಲಾಗುತ್ತದೆ.
WHO ಇದುವರೆಗೆ ಆಲ್ಫಾ, ಬೀಟಾ, ಗಾಮಾ, ಡೆಲ್ಟಾಗಳನ್ನು ಆತಂಕಕಾರಿ ರೂಪಾಂತರಿಗಳೆಂದು ಗುರುತಿಸಿದೆ. ಹೊಸದಾಗಿ Omicron ಆ ಪಟ್ಟಿಗೆ ಸೇರಿದೆ. ಇದರ ಜೊತೆಗೆ, ಇತರ ಎರಡು ರೀತಿಯ ವೈರಸ್‌ಗಳನ್ನು 'ಆಸಕ್ತಿಯ ರೂಪಾಂತರಿʼ ಎಂದು WHO ಗುರುತಿಸಿದೆ. ಅವು ಲ್ಯಾಮ್ಡಾ, ಮೂ. ಲ್ಯಾಮ್ಡಾ ಮೊದಲು ಡಿಸೆಂಬರ್ 2020 ರಲ್ಲಿ ಪೆರುವಿನಲ್ಲಿ ಕಾಣಿಸಿಕೊಂಡಿತ್ತು. ಮೂ ಈ ವರ್ಷದ ಜನವರಿಯಲ್ಲಿ ಕೊಲಂಬಿಯಾದಲ್ಲಿ ಹೊರಬಿದ್ದಿತ್ತು. ವೈರಸ್‌ಗಳಲ್ಲಿ ಆನುವಂಶಿಕ ರೂಪಾಂತರಗಳು ಸಂಭವಿಸಿ, ಅಸು ರೋಗದ ಹರಡುವಿಕೆ, ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ 'ಓಮಿಕ್ರಾನ್' ..
ಹೊಸ ರೂಪಾಂತರಿ ಓಮಿಕ್ರಾನ್ ಅನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲಾಗಿದೆ. ನಂತರ ಬೆಲ್ಜಿಯಂ, ಬೋಟ್ಸ್ವಾನಾ, ಹಾಂಗ್ ಕಾಂಗ್‌ನಲ್ಲಿ ಪ್ರಕರಣಗಳು ವರದಿಯಾಗಿವೆ. ಇತರ ರೂಪಾಂತರಗಳಿಗಿಂತ ವೇಗವಾಗಿ ಹರಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾದವರು ಹಾಗೂ ಲಸಿಕೆ ಹಾಕಿಸಿಕೊಂಡವರಿಗೂ ವೈರಸ್‌ಗೆ ತುತ್ತಾಗುವ ಅಪಾಯವಿದೆ ಎಂದು ಎಚ್ಚರಿಸಿದೆ.