ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ಪ್ರವಾಹ ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ಏರಿಕೆ
ಸಿಡ್ನಿ: ಫೆಬ್ರವರಿ 28: ತೀವ್ರ ಹವಾಮಾನ ವ್ಯವಸ್ಥೆಯು ದೇಶದ ಪೂರ್ವ ಕರಾವಳಿಯನ್ನು ಜರ್ಜರಿತಗೊಳಿಸುತ್ತಿದ್ದು, ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ಏರಿದೆ.
ಕ್ವೀನ್ಸ್‌ಲ್ಯಾಂಡ್ ರಾಜ್ಯದ ಪೊಲೀಸರು ಸೋಮವಾರ ರಾಜ್ಯದಲ್ಲಿ ಇಬ್ಬರು ವ್ಯಕ್ತಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಒಬ್ಬರು ರಾಜಧಾನಿ ಬ್ರಿಸ್ಬೇನ್‌ನ ಉತ್ತರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಮತ್ತು ಇನ್ನೊಂದು ಗೋಲ್ಡ್ ಕೋಸ್ಟ್‌ನ ಗ್ರಾಮೀಣ ಪ್ರದೇಶದಲ್ಲಿ ಪತ್ತೆಯಾಗಿದೆ.
ಕ್ವೀನ್ಸ್‌ಲ್ಯಾಂಡ್ ಪ್ರೀಮಿಯರ್ ಅನ್ನಾಸ್ಟಾಸಿಯಾ ಪಲಾಸ್ಜ್ ಜುಕ್, ಪ್ರವಾಹ ಹೆಚ್ಚುತ್ತಲೇ ಇರುವುದರಿಂದ ಪ್ರಸ್ತುತ ಆಗ್ನೇಯ ಭಾಗದಾದ್ಯಂತ 1,540ಕ್ಕೂ ಹೆಚ್ಚು ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ಪ್ರವಾಹದಿಂದ ಸುಮಾರು 18,000 ಮನೆಗಳು ಹಾನಿಗೊಳಗಾಗಿದೆ ಮತ್ತು ಸುಮಾರು 1,000 ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಹೇಳಿದರು.
ಕ್ವೀನ್ಸ್‌ಲ್ಯಾಂಡ್‌ನ ಹವಾಮಾನ ಬ್ಯೂರೋ (BoM) ರಾಜ್ಯದಲ್ಲಿ ಅತಿ ಹೆಚ್ಚು ಮಳೆ 530 ಮಿಮೀ ತಲುಪಿದೆ ಮತ್ತು ಮುಂದಿನ ಕೆಲವು ದಿನಗಳವರೆಗೆ ಮಳೆಯು ಮುಂದುವರಿಯುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ಲಿಸ್ಮೋರ್‌ನಲ್ಲಿನ ನದಿಯು 1974 ರ ಗರಿಷ್ಠ 12.15 ಮೀ ಅನ್ನು ಮೀರಿದೆ ಮತ್ತು ಸೋಮವಾರದ ನಂತರ 14.40 ಮೀ ತಲುಪಬಹುದು ಎಂದು ಕ್ವೀನ್ಸ್‌ಲ್ಯಾಂಡ್‌ನ ಹವಾಮಾನ ಬ್ಯೂರೋ ಗಮನಿಸಿದೆ. ಇದು 1954ರಲ್ಲಿ ಕಂಡ ದಾಖಲೆಯ 12.27ಮೀ ಪ್ರವಾಹದ ಮಟ್ಟವನ್ನು ಮೀರಿಸುತ್ತದೆ ಎಂದು ಬ್ಯೂರೋ ಹೇಳಿದೆ.