ಅಂತರರಾಷ್ಟ್ರೀಯ

ನಾರ್ವೆ; ಬಾಣ ಪ್ರಯೋಗಿಸಿ ಐವರ ಹತ್ಯೆ ನಡೆಸಿದ ವ್ಯಕ್ತಿಯ ಬಂಧನ

ನಾರ್ವೆ;  ಬಾಣ ಪ್ರಯೋಗಿಸಿ ಐವರ  ಹತ್ಯೆ ನಡೆಸಿದ  ವ್ಯಕ್ತಿಯ ಬಂಧನ

ಓಸ್ಲೋ,  ಅ 14:  ವ್ಯಾಪಾರ  ಮಳಿಗೆಗಳಲ್ಲಿದ್ದವರ   ಮೇಲೆ   ಬಾಣಗಳನ್ನು ಪ್ರಯೋಗಿಸಿ   ಐವರನ್ನು ಹತ್ಯೆ  ನಡೆಸಿದ್ದ      ವ್ಯಕ್ತಿಯೊಬ್ಬ   ಪೊಲೀಸರ  ಅತಿಥಿಯಾಗಿರುವ ಘಟನೆ  ನಾರ್ವೆ  ರಾಜಧಾನಿ ಓಸ್ಲೋಗೆ ಸಮೀಪದಲ್ಲಿರುವ   ಪ್ರದೇಶದಲ್ಲಿ  ನಡೆದಿದೆ.

ಘಟನೆಯಲ್ಲಿ   ಒಬ್ಬ ಅಧಿಕಾರಿ    ಸೇರಿದಂತೆ  ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.   ಘಟನೆಯ ವೇಳೆ  ಅಧಿಕಾರಿ ರಜೆಯಲ್ಲಿದ್ದು, ಅಂಗಡಿಯೊಳಗಿದ್ದ ಎಂದು  ಘಟನೆ ನಡೆದ ಸ್ಥಳವಾದ ಕೋನ್ಸ್​ಬರ್ಗ್​ನ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನಾರ್ವೆ    ನಿಯೋಜಿತ  ಪ್ರಧಾನಿ    ಗಹ್ರ್ ಸ್ಟೋರೆ  ಈ ದಾಳಿಯನ್ನು ಅತ್ಯಂತ ಕ್ರೂರ ಎಂದು    ಪ್ರತಿಕ್ರಿಯಿಸಿದ್ದಾರೆ.

ಸುದ್ದಿ ಓದಿ