ಉತ್ತರ ಮ್ಯಾಸಿಡೋನಿಯಾ: ಕೋವಿಡ್ ಆಸ್ಪತ್ರೆಗೆ ಬೆಂಕಿ, 14 ಸಾವು
ಬೆಲ್‌ಗ್ರೇಡ್, ಸೆ.09 ಉತ್ತರ ಮ್ಯಾಸಿಡೋನಿಯಾದ ವಾಯುವ್ಯ ನಗರ ಟೆಟೊವೊದಲ್ಲಿ ಕೋವಿಡ್ ರೋಗಿಗಳ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿಯಿಂದ ಕನಿಷ್ಠ 14 ಜನರು ಸಾವನ್ನಪ್ಪಿ, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬೆಂಕಿಯನ್ನು ನಿಯಂತ್ರಿಸಲು 30 ಅಗ್ನಿಶಾಮಕ ದಳಗಳು ಮತ್ತು ಏಳು ವಾಹನಗಳನ್ನು ಬಳಸಲಾಗಿದೆ ಎಂದು ಅಲ್ಸಾಟ್ ಬ್ರಾಡ್‌ಕಾಸ್ಟರ್ ವರದಿ ಮಾಡಿದೆ.
ಈಗಾಗಲೇ ಬೆಂಕಿಯನ್ನು ನಂದಿಸಿದ್ದು, ಗಾಯಗೊಂಡವರನ್ನು ಸ್ಕೋಪ್ಜೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ವೆಂಕೊ ಫಿಲಿಪ್ಸ್ ಹೇಳಿದ್ದಾರೆ.