ಈಶಾನ್ಯ ಚೀನಾ: ಅನಿಲ ಸ್ಫೋಟದಲ್ಲಿ 8 ಸಾವು, 5 ಜನರಿಗೆ ಗಾಯ
ಡೇಲಿಯನ್, ಸೆಪ್ಟೆಂಬರ್ 11 ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಡೇಲಿಯನ್ ನಗರದ ವಸತಿ ಕಟ್ಟಡದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿಯಲ್ಲಿ ಎಂಟು ಜನರು ಬಲಿಯಾಗಿ ಐವರು ಗಾಯಗೊಂಡಿದ್ದಾರೆ.
ನಗರದ ಪುಲಂಡಿಯನ್ ಜಿಲ್ಲೆಯಲ್ಲಿ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಮಧ್ಯರಾತ್ರಿ 2: 30 ರ ಸುಮಾರಿಗೆ ಬೆಂಕಿಯನ್ನು ನಂದಿಸಿದ್ದಾರೆ.
ಅಗ್ನಿ ಅವಘಡದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಕಟ್ಟಡದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅಪಘಾತದ ಕಾರಣದ ಕುರಿತು ತನಿಖೆ ನಡೆಯುತ್ತಿದೆ.