ಅಂತರರಾಷ್ಟ್ರೀಯ

ದೋಹಾ ಭೇಟಿ ವೇಳೆ ತಾಲಿಬಾನ್‌ ಪ್ರತಿನಿಧಿಗಳೊಂದಿಗೆ ಮಾತುಕತೆ ಇಲ್ಲ; ಬ್ಲಿಂಕೆನ್

ದೋಹಾ ಭೇಟಿ ವೇಳೆ ತಾಲಿಬಾನ್‌ ಪ್ರತಿನಿಧಿಗಳೊಂದಿಗೆ ಮಾತುಕತೆ ಇಲ್ಲ; ಬ್ಲಿಂಕೆನ್

ವಾಷಿಂಗ್ಟನ್, ಸೆ 4  ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರು ದೋಹಾಕ್ಕೆ ಭೇಟಿ ನೀಡಿದಾಗ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿ ಮಾಡುವ ಉದ್ದೇಶ ಇಲ್ಲ ಎಂದು ಹಂಗಾಮಿ ಸಹಾಯಕ ಕಾರ್ಯದರ್ಶಿ ಡೀನ್ ಥಾಂಪ್ಸನ್ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ದೋಹಾದಲ್ಲಿ ತಾಲಿಬಾನ್ ಜೊತೆ ಯಾವುದೇ ಸಭೆ ನಡೆಸಲು ಕುರಿತು ಪ್ರಸ್ತುತ ಯಾವುದೇ ಯೋಜನೆಗಳಿಲ್ಲ" ಎಂದು ತಿಳಿಸಿದ್ದಾರೆ.
ಭಯೋತ್ಪಾದಕ ಗುಂಪಿನ ನೇತೃತ್ವದ ಯಾವುದೇ ಸರ್ಕಾರವನ್ನು ಗುರುತಿಸುವ ನಿಟ್ಟಿನಲ್ಲಿ ಅಮೆರಿಕ ಕಾದು ನೋಡುವ ವಿಧಾನ ಅನುಸರಿಸುತ್ತಿದೆ. ಇದರ ಜೊತೆಗೆ, ತಾಲಿಬಾನ್ ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ಅಂತರ್ಗತ ಸರ್ಕಾರವನ್ನು ರಚಿಸುವ ತನ್ನ ಬದ್ಧತೆಯನ್ನು ಸಾಬೀತುಪಡಿಸಬೇಕಿದೆ ಎಂದು ಅಮೆರಿಕ ಹೇಳಿದೆ.
ಜರ್ಮನಿಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಅಮೆರಿಕ, ಜರ್ಮನಿ ಮತ್ತು ಇತರ ಪಾಲುದಾರರು ತಾಲಿಬಾನ್ ಸರ್ಕಾರದಿಂದ ನಿರೀಕ್ಷೆಗಳ ಕುರಿತು ಚರ್ಚಿಸುತ್ತಾರೆ ಎಂದು ಹೇಳಿದರು.

ಸುದ್ದಿ ಓದಿ