ಒಮ್ರಿಕಾನ್ ರೂಪಾಂತರಿಯಿಂದ ಯಾರೊಬ್ಬರೂ ಸಾವನ್ನಪ್ಪಿಲ್ಲ; ಡಬ್ಲ್ಯೂ ಹೆಚ್ ಒ
ಜಿನೀವಾ, ಡಿ 5: ಒಮಿಕ್ರಾನ್ ರೂಪಾಂತರಿ ಈವರೆಗೆ ವಿಶ್ವದ 38 ದೇಶಗಳಲ್ಲಿ ಪತ್ತೆಯಾಗಿದೆ ಆದರೆ, ಈ ರೂಪಾಂತರಿಯಿಂದ ಈವರೆಗೆ ಯಾರೊಬ್ಬರು ಮೃತಪಟ್ಟಿಲ್ಲ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಹೆಚ್ ಒ ) ಹೇಳಿದೆ.
ಮಾರಕ ರೋಗದ ಹೊಸ ತಳಿಯನ್ನು ನಿಯಂತ್ರಿಸಲು ಜಗತ್ತಿನ ಎಲ್ಲ ದೇಶಗಳು ಕ್ರಮಗಳಿಗೆ ಮುಂದಾಗುತ್ತಿರುವ ಬೆನ್ನಲ್ಲೇ ಡಬ್ಲ್ಯೂ ಹೆಚ್ ಒ ಈ ಹೇಳಿಕೆ ನೀಡಿದೆ.
ಈ ರೂಪಾಂತರಿ ಉಂಟುಮಾಡುವ ರೋಗದ ತೀವ್ರತೆ, ಪರಿಣಾಮಕಾರಿ ಚಿಕಿತ್ಸೆ, ಲಸಿಕೆ ಪ್ರಯೋಗದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮುಂದುವರಿಸಿದ್ದಾರೆ.
ಡಬ್ಲ್ಯೂಹೆಚ್‌ಒ, ಒಮಿಕ್ರಾನ್ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ್ದು, ಹೊಸ ತಳಿಯಿಂದ ಜಗತ್ತಿನಲ್ಲಿ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದೆ.
ಹೊಸ ಕೋವಿಡ್ ರೂಪಾಂತರಿ ಡೆಲ್ಟಾದಂತೆ, ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ ತೊಡಕಾಗುವ ಸಂಭವವಿದೆ ಎಂದು ವಿಶ್ವ ಹಣಕಾಸು ಸಂಸ್ಥೆ(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಈಗಾಗಲೇ ಭವಿಷ್ಯ ನುಡಿದಿದ್ದಾರೆ.