ಇರಾನ್ ರಹಸ್ಯ ಯುರೇನಿಯಂ ಸಮೃದ್ದಿಬಗ್ಗೆ ಯಾವುದೇ ಮಾಹಿತಿ ಇಲ್ಲ; ಐಎಇಎ
ವಾಷಿಂಗ್ಟನ್, ಅ 22: ಇರಾನ್ ಯುರೇನಿಯಂ ಅನ್ನು ರಹಸ್ಯವಾಗಿ ಪುಷ್ಟೀಕರಿಸುವ ಯಾವುದೇ ಮಾಹಿತಿ ಇಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ( ಐಎಇಎ) ಮಹಾ ನಿರ್ದೇಶಕ ರಾಫೆಲ್ ಗ್ರೋಸಿ, ಸ್ಟಿಮ್ಸನ್ ಸೆಂಟರ್ ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇರಾನ್ ರಹಸ್ಯವಾಗಿ ಯುರೇನಿಯಂ ಸಮೃದ್ದಗೊಳಿಸುವ ಕಾರ್ಯ ನಡೆಸುತ್ತಿದೆ ಎಂಬ ಯಾವುದೇ ಮಾಹಿತಿ ಇಲ್ಲ. ಒಂದೊಮ್ಮೆ ಅವುಗಳನ್ನು ನಾವು ಪರಿಶೀಲಿಸಲು ಅನುಮತಿಸಿದರೆ, ನನ್ನ ತಪಾಸಣೆ ವ್ಯವಸ್ಥೆ ಸಾಮರ್ಥ್ಯದಲ್ಲಿ ನನಗೆ ಹೆಚ್ಚಿನ ವಿಶ್ವಾಸವಿದೆ ಎಂದು ರಾಫೆಲ್ ಗ್ರೋಸಿ ತಿಳಿಸಿದ್ದಾರೆ.