ಅಂತರರಾಷ್ಟ್ರೀಯ

ಯಾವುದೇ ಸೂಪರ್ ಪವರ್ ಭಾರತವನ್ನ ಅಲುಗಾಲಿಡಲು ಸಾಧ್ಯವಿಲ್ಲ: ಇಮ್ರಾನ್ ಖಾನ್

ಯಾವುದೇ ಸೂಪರ್ ಪವರ್ ಭಾರತವನ್ನ ಅಲುಗಾಲಿಡಲು ಸಾಧ್ಯವಿಲ್ಲ: ಇಮ್ರಾನ್ ಖಾನ್

ಇಸ್ಲಾಮಾಬಾದ್: ಏಪ್ರಿಲ್ 09 : ಅವಿಶ್ವಾಸ ಗೊತ್ತುವಳಿಯಿಂದ ಸಂಕಷ್ಟಕ್ಕೆ ಸಿಲುಕಿರೋ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಭಾರತವನ್ನ ಹಾಡಿ ಹೊಗಳಿದ್ದಾರೆ.  ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ ಭಾರತವನ್ನು ಯಾವುದೇ ಸೂಪರ್ ಅಲುಗಾಡಿಸಲು ಸಾಧ್ಯವಿಲ್ಲ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ತಿರೋ ಭಾರತದ ನಿರ್ಧಾರವನ್ನ ಪರೋಕ್ಷವಾಗಿ ಪ್ರಸ್ತಾಪಿಸಿ ಯಾವುದೇ ಮಹಾಶಕ್ತಿಯು ಭಾರತಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರದಲ್ಲಿ ವಿದೇಶಗಳ ಕೈವಾಡವಿದೆ ಎಂದು ಪುನರುಚ್ಚರಿಸಿದರು.

ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ , ಸುಪ್ರೀಂ ಕೋರ್ಟ್ ತೀರ್ಪಿನಿಂದ ನಾನು ಅಸಮಾಧಾನಗೊಂಡಿದ್ದೇನೆ. ಪಾಕಿಸ್ತಾನದ ಯುವಕರು ನಮ್ಮ ಭವಿಷ್ಯ . ಆದರೆ ಅವರು ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಳ್ಳುತ್ತಿರುವ ನಾಯಕರನ್ನು ನೋಡಿದರೆ, ನಾವು ಅವರಿಗೆ ಯಾವ ನಿದರ್ಶನವನ್ನು ನೀಡುತ್ತೇವೆ? ಎಂದರು. ಕುದುರೆ ವ್ಯಾಪಾರ ಬಗ್ಗೆ ಆರೋಪಿಸಿದ ಇಮ್ರಾನ್ ಖಾನ್ ಸಂಸದರನ್ನ  ಕುರಿಗಳಂತೆ ಮಾರಾಟ ಮಾಡಲಾಗುತ್ತಿದೆ ಎಂದರು .

ನಾಚಿಕೆಯಿಲ್ಲದೆ ಮಾಧ್ಯಮಗಳು ಕೂಡ ಸರ್ಕಾರದ ಪತನವನ್ನು ಸಂಭ್ರಮಿಸುತ್ತಿವೆ ಎಂದು ಮಾಧ್ಯಮಗಳ ಮೇಲೆ ಕಿಡಿಕಾರಿದರು.

ಯುಎಸ್ ರಾಜತಾಂತ್ರಿಕರು ನಮ್ಮವರನ್ನ ಭೇಟಿಯಾಗುತ್ತಿದ್ದಾರೆ ಎಂದು ತಿಳಿದ ಬಳಿಕ ನಮಗೆ ಸಂಪೂರ್ಣ ಯೋಜನೆ ಅರ್ಥವಾಯಿತು.  ನಮ್ಮ ದೇಶದ ಸಾರ್ವಭೌಮತ್ವ ನಿಮ್ಮ ಕೈಯಲ್ಲಿದೆ. ನೀವು ಅದನ್ನು ರಕ್ಷಿಸಬೇಕಾಗಿದೆ. ಬಳಸಿ ಬಿಸಾಡಲು ನಾವು ಟಿಷ್ಯೂ ಪೇಪರ್ ಗಳಲ್ಲ.

ಹೊರಬನ್ನಿ, ಪ್ರತಿಭಟಿಸಿ, ನಿಮ್ಮ ಆಜಾದಿಯನ್ನು ಉಳಿಸಿ. ಈ ನಾಟಕವನ್ನು ಪ್ರತಿಭಟಿಸಬೇಕು. ನಾವು ತ್ಯಾಗ ಮಾಡದಿದ್ದರೆ ಇಲ್ಲಿ ಆಮದು ಮಾಡಿಕೊಂಡ ಸರ್ಕಾರವನ್ನು ಹಾಕಬಹುದು ಎಂದು ಗುಡುಗಿದರು.

ಸುದ್ದಿ ಓದಿ