ನಿಪ್ಪಾಣಿ ಪೊಲೀಸರ ಕಾರ್ಯಾಚರಣೆ : ಇಬ್ಬರು ಕಳ್ಳರ ಬಂಧನ, 16.10 ಲಕ್ಷ ಮೌಲ್ಯದ 23 ದ್ವಿಚಕ್ರ ವಾಹನಗಳ ವಶ
ಬೆಳಗಾವಿ : ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಜಿಲ್ಲೆಯ ನಿಪ್ಪಾಣಿ ಶಹರ ಪೊಲೀಸ ಠಾಣೆಯ ಪೊಲೀಸರು ಬಂಧಿತ ಖದೀಮರಿಂದ ಸುಮಾರು 16.10 ಲಕ್ಷ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಿ. 17ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ, ಹೆಚ್ವುವರಿ ಎಸ್ ಪಿ ಎಮ್. ವೇಣುಗೋಪಾಲ, ಚಿಕ್ಕೊಡಿ ಡಿಎಸ್ ಪಿ ಬಸವರಾಜ ಯಲಗಾರ, ನಿಪ್ಪಾಣಿ ಸಿಪಿಐ ಎಸ್.ಸಿ.ಪಾಟೀಲ, ಇರುಗಳ ಮಾರ್ಗದರ್ಶನದಲ್ಲಿ ನಿಪ್ಪಾಣಿ ಶಹರ ಪಿಎಸ್ ಐ ವಿನೋದ ಪೂಜಾರಿ ಇವರ ನೇತೃತ್ವದಲ್ಲಿ ನಿಪ್ಪಾಣಿ ಶಹರ ಪೊಲೀಸ ಠಾಣೆಯ ಸಿಬ್ಬಂದಿಗಳಾದ ಎಎಸ್ ಐ ಎಮ್. ಜಿ. ಮುಜಾವರ, ಆರ್.ಜಿ. ದಿವಟಿ, ಪಿ.ಎಮ್.ಗಸ್ತಿ, ಎಮ್.ಬಿ.ಕಲ್ಯಾಣಿ ಹಾಗೂ ಗಜಾನನ ಬೋವಿ, ಸಲೀಂ ಮುಲ್ಲಾ, ಎಸ್.ಎನ್. ಅಸ್ಕಿ, ಯಾಸೀನ ಮೌಲಾ ಕಳಾವಂತ, ಇವರೊಂದಿಗೆ ದಿ. 17 ರಂದು ನಿಲ್ದಾಣಿ ಶಹರ ಹದ್ದಿಯ ಶಿರಗುಪ್ಪಿ ರಸ್ತೆಯ ಕ್ರಾಸ್ ಹತ್ತಿರ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಲಾಯಿತು.
ವ ಬಳಿಕ ಅವರ ಬಳಿ ಇದ್ದ ಒಂದು ಮೋಟಾರ ಸೈಕಲ್‌ನ್ನು ಜಪ್ತ ಮಾಡಿ, ಹೆಚ್ಚಿನ ತನಿಖೆ ನಡೆಸಲಾಗಿತ್ತು. ಈ ಆರೋಪಿತರು ಧಾರವಾಡ ಜಿಲ್ಲೆಯ ಧಾರವಾಡ ಉಪನಗರ ಠಾಣಿ-02, ಬೆಳಗಾವಿ ಶಹರ ವ್ಯಾಪ್ತಿಯ ಮಾರ್ಕೇಟ ಮೊಅಸ ಠಾಣಿ-01, ಎಪಿಎಮ್‌ಸಿ ಪೊಲೀಸ್ ಠಾಣಿ-01, ಮಾರಿಹಾಳ ಪೊಲೀಸ ಠಾಣೆ-04, ಬೆಳಗಾವಿ ಜಿಲ್ಲೆಯ ಸಂಕೇಶ್ವರ ಠಾಣಿ-01, ಬೈಲಹೊಂಗಲ-01, ನಿಪ್ಪಾಣಿ ಶಹರಪೊಲೀಸ್ ಠಾಣೆ-01 ಹಾಗೂ ಇನ್ನೂ 12 ಮೋಟಾರ ಸೈಕಲಗಳನ್ನು ಕಳವು ಮಾಡಿರುವದು ತನಿಖೆಯಲ್ಲಿ ತಿಳಿದು ಬಂದಿರುತ್ತದೆ.
ಸದರಿಯವರಿಂದ ನಿಪ್ಪಾಣಿ ಶಹರ ಪೊಲೀಸ್ ಠಾಣಾ ಗುನ್ನಾ ನಂ.29/2023 ಕಲಂ:379 ಐಪಿಸಿ ಪ್ರಕರಣದಲ್ಲಿ ಕಳುವಾದ ಒಂದು ಮೋಟರ ಸೈಕಲ ಹಾಗೂ ಈ ಮೇಲ್ಕಂಡಂತೆ ಇತರೇ ಕಡೆಗಳಲ್ಲಿ ಸದರಿ ಆರೋಪಿತರು ಕಳ್ಳತನಮಾಡಿರುವ ಇತರೇ 22 ಮೋಟರ ಸೈಕಲಗಳು ಹೀಗೆ ಒಟ್ಟು ರೂ. 16,10,000/-ಕಿಮ್ಮತ್ತಿನ 23 ಮೋಟರ ಸೈಕಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಪ್ರಶಂಶೆ ವ್ಯಕ್ತಪಡಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.