ರಬಾಕಾವಿಬನಹಟ್ಟಿ

ಪತ್ರಿಕಾ ವಿತರಕರ ಕಾರ್ಯ ಅನನ್ಯವಾದುದು : ಕಾಂಗ್ರೆಸ್ ಧುರೀಣ ಡಾ. ಎ. ಆರ್‌.ಬೆಳಗಲಿ

ಪತ್ರಿಕಾ ವಿತರಕರ ಕಾರ್ಯ ಅನನ್ಯವಾದುದು : ಕಾಂಗ್ರೆಸ್ ಧುರೀಣ ಡಾ. ಎ. ಆರ್‌.ಬೆಳಗಲಿ

ರಬಕವಿ-ಬನಹಟ್ಟಿ 18: ಕೋರೊನಾ ಮಹಾಮಾರಿಯ ಭೀಕರ ಅಲೆಯಲ್ಲಿಯೂ ತಪ್ಪದೇ ಪ್ರತಿದಿನ ಮಳೆ-ಬಿಸಿಲೆನ್ನದೆ ನಗರಗಳಲ್ಲಿ ಪತ್ರಿಕೆ ವಿತರಣೆ ಮಾಡಿ, ಲೋಕದ ಸುದ್ದಿಗಳನ್ನು ಜನತೆಗೆ ಮುಟ್ಟುವಂತೆ ಮಾಡುತ್ತಾರೆ. ಕತ್ರಕರ್ತರು, ವೈದ್ಯರು ಸೇರಿದಂತೆ ಪತ್ರಿಕಾ ವಿತರಕರು ಕೋರೊನಾ ವಾರಿಯರ್ಸಗಳಾಗಿ ಸೇವೆ ಮಾಡುತ್ತಾರೆ. ಪತ್ರಿಕಾ ವಿತರಕರ ಕಾರ್ಯ ಅನನ್ಯವಾದುದು ಎಂದು ತೇರದಾಳ ಮತಕ್ಷೇತ್ರದ ಧುರೀಣ ಹಾಗೂ ಖ್ಯಾತ ವೈದ್ಯ ಡಾಽಽ ಎ.ಆರ್‌.ಬೆಳಗಲಿ ಹೇಳಿದರು. 

ರಬಕವಿಯ  ದಾನಮ್ಮದೇವಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ಯುಥ್ ಕಾರ್ಯಕರ್ತರ ಬಳಗದಿಂದ ರಬಕವಿ-ಬನಹಟ್ಟಿ, ರಾಮಪುರ, ಹೊಸೂರ ನಗರಗಳಲ್ಲಿ ಪತ್ರಿಕೆ ವಿತರಣೆ ಮಾಡುವವರಿಗೆ ದಿನಸಿ ಕಿಟ್ ವಿತರಣೆ ಮಾಡಿ ಮಾತನಾಡುತ್ತಾ, ಈ ಬಾರಿಯ ಲಾಕ್‌ಡೌನ್ ಸಮಯದಲ್ಲಿ ಬೇರೆ ಯಾವುದೇ ಕೆಲಸ ಮಾಡದೇ ಕೇವಲ ಪತ್ರಿಕೆ ವಿತರಣೆ ಮಾಡಿ ಜೀವನ ನಿರ್ವಹಿಸುತ್ತಿರುವುದು ಕಷ್ಟಕರವಾಗಿದೆ. ಕೋರೊನಾ ಕಷ್ಟಕಾಲದಲ್ಲಿ ನಾವು ಹಾಗೂ ಯುಥ ಕಾಂಗ್ರೆಸ್ ಕಾರ್ಯಕರ್ತ ಬಳಗದಿಂದ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇವೆ. ಕಳೆದ ಬಾರಿ ಲಾಕ್‌ಡೌನ್ ಸಮಯದಲ್ಲಿ ತೇರದಾಳ ಕ್ಷೇತ್ರಾದ್ಯಂತ ಸಾವಿರಾರು ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಗಿತ್ತು. ಪತ್ರಕರ್ತರಿಗೆ ಹಾಗೂ ಪತ್ರಿಕಾ ವಿತರಕರಿಗೆ ನಮ್ಮ ಆಸ್ಪತ್ರೆಯಿಂದ ಸೌಲಭ್ಯಗಳನ್ನು ನೀಡುತ್ತೇವೆ. ಪತ್ರಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು.   ತಮ್ಮ ಜೀವದ ಹಂಗು ತೊರೆದು ಹಗಲು-ರಾತ್ರಿ ಎನ್ನದೆ ಯಾವುದೇ ಸಮಯದಲ್ಲಿ ತೆರಳಿ ಸುದ್ದಿ ಮಾಡುವ ಪತ್ರಕರ್ತರು ತಮ್ಮ ಆರೋಗ್ಯ ಕಡೆಗೂ ಗಮನ ಕೊಡಬೇಕು ಎಂದು ಹೇಳಿದರು. 

ಹಿರಿಯ ಪತ್ರಕರ್ತ ಪ್ರಭು ಕೋಪರ್ಡೆ ಮಾತನಾಡಿ, ಪತ್ರಿಕೆ ಹಂಚುವ ಜೊತೆ ಉತ್ತಮ ವಿದ್ಯಾರ್ಜನೆ ಮಾಡುತ್ತಾ ಉನ್ನತವಾದ ಸ್ಥಾನಗಳಿಸಿದ ಅನೇಕ ಸಾಧಕರಿದ್ದಾರೆ. ವಿಶ್ವದ ಸುದ್ದಿಗಳನ್ನು ನಮಗೆ ತಿಳಿಸುವ ಪತ್ರಿಕೆಯನ್ನು ಪತ್ರಿದಿನ ನಮಗೆ ಹಂಚುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯವಾದುದು. ಸರಕಾರ ಪತ್ರಿಕಾ ವಿತರಕರಿಗೆ ಸವಲತ್ತುಗಳನ್ನು ನೀಡಬೇಕೆಂದರು. 

ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಬಸವರಾಜ ಕೊಕಟನೂರ ಮಾತನಾಡಿ, ಸಹೃದಯಿಗಳಾದ ಡಾಽಽ ಬೆಳಗಲಿಯವರು ನೊಂದವರಿಗೆ ಸಹಾಯ ಮಾಡುವ ಒಳ್ಳೇಯ ಮನಸ್ಸಿನವರಾಗಿದ್ದಾರೆ. ಬಡವರ ಕಷ್ಟದಲ್ಲಿ ಭಾಗಿಯಾಗುವ ಮನೋಧರ್ಮವುಳ್ಳಂತಹ ತೆರೆಮರೆಯಲ್ಲಿ ಸಹಾಯ ವ್ಯಕ್ತಿಯಾದ್ದಾರೆ. ಕೋರೊನಾ ಭೂಮಂಡಲದಿಂದಲೇ ನಿರ್ಗಮಿಸಲಿ ಎಂದರು. 

ಜಿಲ್ಲಾ ಯುಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೂರಜ ಅವಟಿ, ಫಾರೂಖ ಪಕಾಲಿ, ಶಂಕರ ಕೆಸರಗೊಪ್ಪ, ಅರುಣ ಗಾಣಿಗೇರ, ರ-ಬ ಯುಥ್ ಅಧ್ಯಕ್ಷ ಸುನೀಲ ಬನಹಟ್ಟಿ, ಮೊಹಮ್ಮದ, ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು. 

ರಬಕವಿ-ಬನಹಟ್ಟಿ ನಗರಗಳ ಪತಕರ್ತರು ಉಪಸ್ಥಿತರಿದ್ದರು, ಮಾರುತಿ ಸೋರಗಾಂವಿ ಸ್ವಾಗತಿಸಿದರು. ಕಾರ್ತಿಕ ಹನಗಂಡಿ ವಂದಿಸಿದರು. ರಬಕವಿ-ಬನಹಟ್ಟಿ ವ್ಯಾಪ್ತಿಯ 50ಕ್ಕೂ ಅಧಿಕ ಪತ್ರಿಕೆ ವಿತರಣಾಕಾರರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು. 


ಸುದ್ದಿ ಓದಿ