ಮೂಡಲಗಿ

ಗುರುಕುಲ ಶಿಕ್ಷಣದ ಜೊತೆ ನವ ಸಮಾಜದ ನಿರ್ಮಾಣವಾಗಬೇಕು -ಪೂಜಾ ಪಾರ್ಶಿ

ಗುರುಕುಲ ಶಿಕ್ಷಣದ ಜೊತೆ ನವ ಸಮಾಜದ ನಿರ್ಮಾಣವಾಗಬೇಕು -ಪೂಜಾ ಪಾರ್ಶಿ

ಮೂಡಲಗಿ 22 : ಗುರುಕುಲದ ಶಿಕ್ಷಣ ನವ ಸಮಾಜದ ನಿರ್ಮಾಣಕ್ಕೆ ಪೇರಣೆಯಾಗಿದ್ದು ಮಕ್ಕಳ ಕಲಿಕೆ ಗುರುಗಳ ಕುಟೀರದಲ್ಲಿ ನಡೆದಾಗ ವ್ಯಕ್ತಿತ್ವ ವಿಕಸನಕ್ಕೆ ಪೇರಣೆಯಾಗಲಿದ್ದು ನಮ್ಮ ಭಾರತೀಯ ಶಿಕ್ಷಣವು ಗುರುಕುಲದ ಮೂಲಕ ಪ್ರಾರಂಭವಾಗಿರುವ ಚರಿತ್ರೆ ಇದೆ. ಗುರುಕುಲದಲ್ಲಿ ಮಕ್ಕಳ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಆಧ್ಯಾತ್ಮದ ಅರಿವು ಹಾಗೂ ವೈಚಾರಿಕತೆಯ ಜೀವನಕ್ಕೆ ಸ್ಪೂರ್ತಿಯನ್ನು ನೀಡಲು ವೇದಗಳಿಂದ ಆಧುನಿಕ ಬದುಕಿನ ಮೌಲ್ಯಗಳನ್ನು ಅರಿಯಲು ಸಾಧ್ಯವಿದೆ. ಮಕ್ಕಳಲ್ಲಿ ಗುರುಕುಲದ ಪರಿಭಾವನೆಯನ್ನು ಬೆಳಸುವುದು ಅವಶ್ಯಕವಾಗಿದೆ ಎಂದು ಮೂಡಲಗಿ ಆರ್‌.ಡಿ.ಸಂಸ್ಥೆಯ ಉಪಾಧ್ಯಕ್ಷರಾದ ಪೂಜಾ ಪಾರ್ಶಿ ಹೇಳಿದರು. 

ಪಟ್ಟಣದ ಆರ್‌ಡಿಎಸ್ ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆಯಲ್ಲಿ ಗುರುಪೌರ್ಣಿಮೆಯ ನಿಮಿತ್ಯವಾಗಿ ಮಕ್ಕಳಿಗೆ ಗುರುಕುಲ ಅಣುಕು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಜೀವನ ನಮ್ಮ ಸಂಸ್ಕೃತಿಯನ್ನು ಮರೆಮಾಚುವಂತಿದ್ದು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವುದು ಅವಶ್ಯಕವಿದೆ ಎಂದರು.  

ಪದವಿ ಕಾಲೇಜಿನ ಪ್ರಾಚಾರ್ಯ ಸತೀಶ ಗೋಟೂರ ಮಾತನಾಡಿ ಮಕ್ಕಳಲ್ಲಿ ಇಂದು ಕಲಿಕೆ ಯಾಂತ್ರಿಕವಾಗಿದ್ದು ಇದರಿಂದ ನಮ್ಮ ಭಾರತೀಯ ಪದ್ದತಿಗಳು ಮತ್ತು ಮೌಲ್ಯಗಳು ಅವರಲ್ಲಿ ಬೆಳೆಯುತ್ತಿಲ್ಲ ಇಂತಹ ಚಟುವಟಿಕೆಗಳನ್ನು ನೀಡಿ ಮಕ್ಕಳಿಗೆ ಪ್ರೋತ್ಸಾಹಿಸುವುದು ಅವಶ್ಯವಿದೆ ಎಂದರು. 

ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಸಂಗಮೇಶ ಹಳ್ಳೂರ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಮಾತನಾಡಿ ಪುಸ್ತಕದ ಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ ಸಂಪ್ರದಾಯ ಹಾಗೂ ಪ್ರಾಚೀನತೆಯ ಪರಿಕಲ್ಪನೆ ನೀಡವ ಜ್ಞಾನದ ವಿಕಾಸದ ಜೊತೆಗೆ ಭಾರತೀಯ ಸಿದ್ದಾಂತಗಳ ವಿಕಾಸವನ್ನು ಮಕ್ಕಳಲ್ಲಿ ಸೃಷ್ಟಿಸಿ ಅವರಲ್ಲಿ ಬೆಳಸುವುದು ಅವಶ್ಯ ವಿದೆ ಎಂದರು. 

ಕಾರ್ಯಕ್ರಮದಲ್ಲಿ ಉಮೇಶ ಪುಟ್ಟಿ, ಎ.ಆರ್‌.ಹೆಳವಿ ವಿಜಯಲಕ್ಷ್ಮೀ ಪತ್ತಾರ ಎಸ್ ಎಸ್ ಮಾಲಗಾರ ಬಿ.ವಾಯ್‌.ಮಾಳೇದ ಹಾಜರಿದ್ದರು  ಶಿಕ್ಷಕಿ ಪೂಜಾ ಪಾಟೀಲ ಸ್ವಾಗತಿಸಿದರು ಶಿಕ್ಷಕಿ ವಂದನಾ ನಿಡಗುಂದಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ