ಅಂತರರಾಷ್ಟ್ರೀಯ

ಕೊರೊನಾ ನಿಯಂತ್ರಿಸಲು ಹೊಸ ಔಷಧ

ಕೊರೊನಾ  ನಿಯಂತ್ರಿಸಲು   ಹೊಸ  ಔಷಧ

ವಾಷಿಂಗ್ಟನ್, 02:  ಕೊರೊನಾ   ಸಾಂಕ್ರಾಮಿಕ   ವಿರುದ್ದ    ನಡೆದಿರುವ     ಸಮರಕ್ಕೆ    ಮಾತ್ರೆ   ರೂಪದಲ್ಲಿ ಮತ್ತೊಂದು   ಶಸ್ತ್ರಾಸ್ತ್ರ    ಸಿದ್ದಗೊಳ್ಳುತ್ತಿದೆ.    ಅಮೆರಿಕಾದ  ಪ್ರಮುಖ  ಅಂತಾರಾಷ್ಟ್ರೀಯ ಸಂಸ್ಥೆ ಮರ್ಕ್  ಅಭಿವೃದ್ಧಿಪಡಿಸಿದ  ಔಷಧಿ     "ಮಾಲ್ನುಪಿರವಿರ್‌"    ಕೋವಿಡ್‌  ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿಯಾಗಿ  ಕೆಲಸಮಾಡುತ್ತದೆ  ಎಂದು  ವೈದ್ಯಕೀಯ ಪ್ರಯೋಗಗಳಲ್ಲಿ  ಕಂಡು ಬಂದಿದೆ.   ಒಟ್ಟು  775  ಮಂದಿ ಸ್ವಯಂ ಸೇವಕರ ಮೇಲೆ  ಈ  ಔಷಧಿಯನ್ನು  ಪ್ರಯೋಗಿಸಲಾಗಿದೆ. 

ಕೋವಿಡ್ ಸೋಂಕು ಆರಂಭಗೊಂಡ  ಐದು ದಿನಗಳ  ನಂತರ  ರೋಗಿಗಳಿಗೆ   ಔಷಧ  ನೀಡಿ  ಪರೀಕ್ಷೆ  ನಡೆಸಿದ್ದಾರೆ.       ಔಷಧಿ   ತೆಗೆದುಕೊಂಡವರು ಇತರರಿಗಿಂತ    ತ್ವರಿತವಾಗಿ ಚೇತರಿಸಿಕೊಂಡಿದ್ದಾರೆ.   ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಅಗತ್ಯವಿಲ್ಲ,  ಜೊತೆಗೆ   ಔಷಧಿ  ಬಳಕೆಯ  ನಂತರ  ಕಡಿಮೆ ಸಾವುಗಳು  ನಮೋದಾಗಿರುವುದು  ಫಲಿತಾಂಶಗಳು  ದೃಢಪಡಿಸಿವೆ.   ಔಷಧಿಯ ತುರ್ತು   ಬಳಕೆ  ಅನುಮತಿಗಾಗಿ     ಸರ್ಕಾರಕ್ಕೆ ಅರ್ಜಿ ಸಲ್ಲಿಸುವುದಾಗಿ  ಸಂಸ್ಥೆಯ  ಪ್ರತಿನಿಧಿಗಳು ಹೇಳಿದ್ದಾರೆ.

ಸುದ್ದಿ ಓದಿ