ಹೊಸ ಕೊರೋನಾ ವೈರಸ್; ಪ್ರವಾಸಿಗರ ನಿರ್ಬಂಧ ಆದೇಶ ವಿಸ್ತರಿಸಿದ ಸೌದಿ ಅರೆಬಿಯಾ
ರಿಯಾದ್,
ಡಿಸೆಂಬರ್ 28: ಹೊಸ ರೂಪಾಂತರದ ಕರೋನಾವೈರಸ್ ಹರಡುವಿಕೆ ತಡೆಯುವ ಸಲುವಾಗಿ ಸೌದಿ ಅರೇಬಿಯಾ
ದೇಶಕ್ಕೆ ಇತರ ರಾಷ್ಟ್ರಗಳಿಂದ ಪ್ರವೇಶ ನಿರ್ಬಂಧವನ್ನು ಮತ್ತೊಂದು ವಾರ ವಿಸ್ತರಿಸಿದೆ ಎಂದು ರಾಜ್ಯ
ಎಸ್‌ಪಿಎ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.
ಹಲವಾರು ದೇಶಗಳಲ್ಲಿ ಹೊಸ ಕರೋನವೈರಸ್ ರೂಪಾಂತರದಿಂದಾಗಿ ಅಂತರರಾಷ್ಟ್ರೀಯ ವಿಮಾನಯಾನ, ಸಮುದ್ರ ಮತ್ತು ಭೂ ಗಡಿ ದಾಟುವಿಕೆಯನ್ನು ಮುಚ್ಚುವುದಾಗಿ ಡಿ 21 ರಂದು ಸೌದಿ ಅರೆಬಿಯಾ ಘೋಷಿಸಿತ್ತು.
ಸೌದಿ ಅರೇಬಿಯಾದ ನೆರೆಯ ಕುವೈತ್ ಮತ್ತು ಒಮಾನ್ ಕೂಡ ಇದೇ ಮಾರ್ಗ ಅನುಸರಿಸಿದ್ದವು. ಆದರೆ, ಅ ದೇಶಗಳು ಡಿ.29ರಿಂದ ನಿರ್ಬಂಧ ಸಡಿಲಗೊಳಿಸಿವೆ.