ಅಂತರರಾಷ್ಟ್ರೀಯ

ರಷ್ಯಾ ದಾಳಿಯಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತ ಹತ

ರಷ್ಯಾ ದಾಳಿಯಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತ ಹತ

ಕೈವ್: ಮಾರ್ಚ್ 13 : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 18ನೇ ದಿನ ಇಂದು ಮುಂಂದುವರಿದಿದೆ. ಇದರ ಹೊರತಾಗಿಯೂ ಉಭಯ ದೇಶಗಳ ಮಧ್ಯೆ ಇದುವರೆಗೆ ಕದನ ವಿರಾಮದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಒಂದೆಡೆ ಉಕ್ರೇನ್ ನಗರಗಳ ಮೇಲೆ ದಾಳಿ ನಡೆಸಿ ರಷ್ಯಾ ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ಉಕ್ರೇನ್ ನಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದುವರೆಗೆ 13,000ಕ್ಕೂ ಹೆಚ್ಚು ರಷ್ಯಾದ ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.

ಈ ಮಧ್ಯೆ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತರೊಬ್ಬರು ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಇರ್ಪಿನ್ ಬಳಿ ರಷ್ಯಾದ ಪಡೆಗಳು ಕಾರಿನ ಮೇಲೆ ಗುಂಡು ಹಾರಿಸಿದಾಗ ವೀಡಿಯೊ ಪತ್ರಕರ್ತ ಬ್ರೆಂಡ್ ರೆನಾಡ್ (51) ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರೊಂದಿಗಿದ್ದ ಮತ್ತೋರ್ವ ಪತ್ರಕರ್ತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸುದ್ದಿ ಓದಿ