ಅಂತರರಾಷ್ಟ್ರೀಯ

ಶುಕ್ರವಾರ ನೂತನ ರಕ್ಷಣಾ ಕಾರ್ಯದರ್ಶಿ ನೇಮಕ- ಬೈಡೆನ್

ಶುಕ್ರವಾರ ನೂತನ ರಕ್ಷಣಾ ಕಾರ್ಯದರ್ಶಿ ನೇಮಕ- ಬೈಡೆನ್

ವಾಷಿಂಗ್ಟನ್, ಡಿಸೆಂಬರ್ 8: ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್   ಅವರು ಶುಕ್ರವಾರ ಹೊಸ  ರಕ್ಷಣಾ ಕಾರ್ಯದರ್ಶಿ ಆಯ್ಕೆಯನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.

ರಕ್ಷಣಾ ಕಾರ್ಯದರ್ಶಿ ಮತ್ತು  ಅಟಾರ್ನಿ ಜನರಲ್ ಹುದ್ದೆಗಳಿಗೆ  ಆಯ್ಕೆಯನ್ನು ಯಾವಾಗ ಪ್ರಕಟಿಸಲಿದ್ದಾರೆ ಎಂಬ ಪ್ರಶ್ನೆಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ  ಬೈಡೆನ್ ಅವರು ಅಟಾರ್ನಿ ಜನರಲ್ ಗೆ  ಹೊಸ ಆಯ್ಕೆಯನ್ನು ಬುಧವಾರ ಘೋಷಿಸಬಹುದು ಎನ್ನಲಾಗಿದೆ.

ಆದರೆ ಈ ಕುರಿತು ಸ್ಪಷ್ಟನೆ ನೀಡಲು ವರದಿಗಾರರು ಕೇಳಿದಾಗ ಅವರು ಯಾವುದೇ  ಪ್ರತಿಕ್ರಿಯೆ ನೀಡಲಿಲ್ಲ .  ಮಾಜಿ ರಕ್ಷಣಾ ಇಲಾಖೆಯ ನೀತಿ ಮುಖ್ಯಸ್ಥ ಮಿಚೆಲ್ ಫ್ಲೂರ್ನಾಯ್ ಮತ್ತು ನಿವೃತ್ತ ಸೇನಾ ಜನರಲ್ ಲಾಯ್ಡ್ ಆಸ್ಟಿನ್ ಪೈಕಿ ಒಬ್ಬರು ಈ ಉನ್ನತ ಹುದ್ದೆಗೆ ಆಯ್ಕೆ ಯಾಗಬಹುದು  ಎಂದೂ ಮಾಧ್ಯಮ ವರದಿ ಮಾಡಿದೆ. 

ಸುದ್ದಿ ಓದಿ