ಅಂತರರಾಷ್ಟ್ರೀಯ

ಭೂಮಾರ್ಗದ ಮೂಲಕ ವಿದೇಶಿಗರ ಪ್ರಯಾಣಕ್ಕೆ ನೇಪಾಳ ಅನುಮತಿ

ಭೂಮಾರ್ಗದ ಮೂಲಕ ವಿದೇಶಿಗರ ಪ್ರಯಾಣಕ್ಕೆ ನೇಪಾಳ ಅನುಮತಿ

ಕಠ್ಮಂಡು, ಸೆ 22   ದಕ್ಷಿಣ ಏಷ್ಯಾ ದೇಶಗಳಲ್ಲಿ ಕೋವಿಡ್‌-19 ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ,  ದೇಶದ ಎಲ್ಲಾ ಗಡಿಗಳನ್ನು ನೇಪಾಳಿ ಮತ್ತು ವಿದೇಶಿ ಪ್ರಜೆಗಳ ಸಂಚಾರಕ್ಕಾಗಿ ಪುನಃ ತೆರೆಯಲು ನಿರ್ಧರಿಸಿದೆ.
ಈ ಕುರಿತು  ನೇಪಾಳದ  ಆರೋಗ್ಯ ಮತ್ತು ಜನಸಂಖ್ಯೆ ರಾಜ್ಯ ಸಚಿವ ಉಮೇಶ್ ಶ್ರೇಷ್ಠಾ ಕ್ಸಿನ್ಹುವಾ  ಬುಧವಾರ ಮಾಹಿತಿ ನೀಡಿದ್ದು, ಈ ಸಂಬಂಧ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಅಥವಾ ಕೋವಿಡ್‌ ನಕಾರಾತ್ಮಕ ಫಲಿತಾಂಶ ಹೊಂದಿರುವ ಹಾಗೂ ಸಂಪೂರ್ಣ ಲಸಿಕೆ ಹಾಕಿಸಿಕೊಂಡ ವಿದೇಶಿಯರು ನೇಪಾಳದಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದರು.
ನೇಪಾಳದಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ಮೇ  11 ರಂದು 9,317 ರ ದಾಖಲೆಯ ಗರಿಷ್ಠ ಮಟ್ಟದಿಂದ ಇತ್ತೀಚಿನ ದಿನಗಳಲ್ಲಿ ದಿನಕ್ಕೆ 2,000  ಕ್ಕಿಂತ ಕಡಿಮೆಗೆ ಇಳಿದಿರುವ ಹಿನ್ನೆಲಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
      ಕರೋನವೈರಸ್‌ನ ಎರಡನೇ ಅಲೆ ಆರಂಭಗೊಂಡ ನಂತರ ನೇಪಾಳ, ಕಳೆದ ಏಪ್ರಿಲ್‌ನಲ್ಲಿ ವಿದೇಶಿಗರನ್ನು ಭೂ ಮಾರ್ಗಗಳ ಮೂಲಕ ನೇಪಾಳಕ್ಕೆ ಭೇಟಿ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ಸುದ್ದಿ ಓದಿ