ಅಂತರರಾಷ್ಟ್ರೀಯ

ತೇಲ್ತುಂಬ್ಡೆ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ: ನ.27ರಂದು ಬಂದ್‌ಗೆ ಕರೆ ನೀಡಿದ ನಕ್ಸಲರು

ತೇಲ್ತುಂಬ್ಡೆ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ:  ನ.27ರಂದು ಬಂದ್‌ಗೆ ಕರೆ ನೀಡಿದ ನಕ್ಸಲರು

ಗಡ್ಚಿರೋಲಿ  : ನ. 20:  ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಹತ್ಯೆ ಸಂಬಂಧ ಅದಕ್ಕೆ ಪ್ರತೀಕಾರ  ತೀರಿಸಿಕೊಳ್ಳುವುದಾಗಿ ನಕ್ಸಲರು ಎಚ್ಚರಿಸಿದ್ದಾರೆ. ಇದರ ನಡುವೆ   ನವೆಂಬರ್ 27 ರಂದು ಆರು ರಾಜ್ಯಗಳಲ್ಲಿ ಬಂದ್‌ಗೆ ಕರೆ   ನೀಡಲಾಗಿದೆ. 

ನವೆಂಬರ್​ 13ರಂದು  ನಡೆದ ಎನ್​ಕೌಂಟರ್​ನಲ್ಲಿ   ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಸೇರಿ 27 ಮಂದಿ ನಕ್ಸಲರನ್ನು  ಹೊಡೆದುರುಳಿಸಲಾಗಿತ್ತು.

ಇದಾದ ನಂತರ ಇದೊಂದು ನಕಲಿ ಎನ್​ಕೌಂಟರ್​ ಎಂದು  ನಕ್ಸಲ್​ ಮುಖಂಡರು ಆರೋಪಿಸಿ, ಈ ಸಂಬಂಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದರು. ಈಗ ಮತ್ತೇ ಪತ್ರಿಕಾ ಪ್ರಕಟಣೆ ಹೊರಡಿಸಿರುವ  ಸಿಪಿಐ (ಮಾವೋವಾದಿ) ಕೇಂದ್ರ ವಕ್ತಾರ ಅಭಯ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ತೆಲಂಗಾಣ ಮತ್ತು ಆಂಧ್ರಪ್ರದೇಶ  ರಾಜ್ಯಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.   27 ಮಾವೋವಾದಿಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು  ಬೆದರಿಕೆ ಹಾಕಿದ್ದಾರೆ. 

ಸುದ್ದಿ ಓದಿ