ಬಳ್ಳಾರಿ

ಇಂದಿನಿಂದ ಕನಕದುರ್ಗಮ್ಮ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

ಇಂದಿನಿಂದ ಕನಕದುರ್ಗಮ್ಮ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ


ಬಳ್ಳಾರಿ, ಅ.10: ನಗರದ ಅಧಿದೇವತೆ  ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ಇಂದಿನಿಂದ 10 ದಿನಗಳ ಕಾಲ  ದಸರಾ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ  ಧರ್ಮಕರ್ತ ಪೂಜಾರಿ ಗಾದೆಪ್ಪ ತಿಳಿಸಿದರು.ಅವರು ನಗರದ ಕನಕದುರ್ಗಮ್ಮ ದೇವಸ್ಥಾನದ ಯಾತ್ರಿ ನಿವಾಸದಲ್ಲಿ  ಶನಿವಾರದಂದು ಸುದ್ದಿಗೋಷ್ಠಿಯನ್ನು ನಡೆಸಿ  ಮಾತನಾಡಿ , ನವರಾತ್ರಿ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ನವದುರ್ಗೆಯರ ಅಲಂಕಾರ, ಲಲಿತ ಸಹಸ್ರನಾಮ ಪಠಣ, ಪುರಾಣ ಪಠಣ, ಭಜನೆ, ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಜಯದಶಮಿಯಂದು ದೇವಿಯ ಪ್ರಧಾನ ಪಲ್ಲಕ್ಕಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.ದಸರಾ ಮಹೋತ್ಸವದ ಅಂಗವಾಗಿ ನಗರದ ಎನ್‌.ಪಿ. ಸರ್ಕಲ್ನಿಂದ ಕನಕದುರ್ಗಮ್ಮ ದೇವಸ್ಥಾನದವರೆಗೆ, ರಾಯಲ್ ಸರ್ಕಲ್ ರಸ್ತೆಯ ಅಂಡರ್ ಬ್ರಿಡ್ಜ್‌ , ಮೋಕಾ ರಸ್ತೆ, ರೇಣುಕ ಕಿಚನ್ ಹಾಗೂ ಕಪ್ಪಗಲ್ಲು ರಸ್ತೆ ಲಯನ್ಸ್‌ ಕ್ಲಬ್ವರೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. 


ಸುದ್ದಿ ಓದಿ