ಗಾಂಧಿನಗರ ಪೊಲೀಸ್ ಠಾಣೆಕೊಲೆ ಪ್ರಯತ್ನ ಪ್ರಕರಣ ದಾಖಲು : ಎಸ್. ಪಿ. ಸುಮನ್ ಪನ್ನೇಕರ್
ಬಳ್ಳಾರಿ. ಅ. 10 : ನಗರದ ತಾಳೂರು ರಸ್ತೆಯ ಪೆಟ್ರೋಲ್ ಬ್ಯಾಂಕ್ ಬಳಿ ನಿನ್ನೆ ಸಂಜೆ ಮಧು, 27 ವರ್ಷ, ವಾಲ್ಮೀಕಿ ಜನಾಂಗ, ಸೂಪರ್ವೈಸರ್, ವಾಸ ಬಸವನಕುಂಟೆ, ಬಳ್ಳಾರಿ ಎಂಬುವವರು ತನ್ನ ಸ್ನೇಹಿತರೊಂದಿಗೆ ಕೋರ್ಟ್ನಲ್ಲಿ ಕೆಲಸ ಮುಗಿಸಿಕೊಂಡು, ಕಾರಿನಲ್ಲಿ ಬಳ್ಳಾರಿ ನಗರದ ತಾಳೂರು ರಸ್ತೆಯ ಶ್ರೀ ನಂದಿ ಕಿರಾಣಿ ಸ್ಟೋರ್ ಮುಂದಿನ ರಸ್ತೆಯಲ್ಲಿ ಹೋಗುತ್ತಿರವಾಗ, 4-5 ಜನರು ಹಳೆಯ ದ್ವೇಷ ಇಟ್ಟುಕೊಂಡು ಕೊಲೆ ಮಾಡುವ ಉದ್ದೇಶದಿಂದ ಮೋಟಾರ್ ಸೈಕಲ್ಗಳ ಮೂಲಕ ಕಾರಿಗೆ ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಕಜ್ಜಿಯಿಂದ ಹೊಡೆದು ರಕ್ತಗಾಯ ಮಾಡಿ, ಕೊಲೆ ಪ್ರಯತ್ನ ನಡೆಸಿಯರುತ್ತಾರೆಂದು ಮಧು ರವರು ಗಾಂಧಿನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ, ಗಾಂಧಿನಗರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ:152/2026, ಕಲಂ: 109(1), 126(2), 189(1), 189(2), 191(2), 115(2), 118(1), 351(3), 352, ಆಧಾರ 190 ಬಿ.ಎನ್.ಎಸ್-2023 ಅಡಿಯಲ್ಲ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ ಎಂದು ಎಸ್ ಪಿ ಡಾಕ್ಟರ್ ಸುಮನ್ ಡಿಪನ್ನೇಕರ್ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಹಳೆಯ ದೇಶದ ಹಿನ್ನೆಲೆಯಲ್ಲಿ ಗುರಾಯಿಸಿ ನೋಡಿದ ಎನ್ನುವ ಕಾರಣಕ್ಕೆ ಮಧು ಎನ್ನುವರ ಮೇಲೆ ನಾಲ್ಕೈದು ಜನರ ತಂಡ ಮಾರಣಾಂತಿಕ ಹಲ್ಲೆ ಮಾಡಿರುತ್ತದೆ ಸದರಿ ಪ್ರಕರಣದ ಆರೋಪಿಗಳ ಪತ್ತೆಗಾಗಿ ಬಳ್ಳಾರಿ ನಗರದ ಉಪ-ವಿಭಾಗ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ 3 ತಂಡಗಳ ರಚನೆ ಮಾಡಲಾಗಿರುತ್ತದೆ. ಆರೋಪಿಗಳ ಪತ್ತೆಯ ಭಾಗವಾಗಿ ಬಳ್ಳಾರಿ ನಗರದ ವಿವಿಧ ರೌಡಿ ಶೀಟರ್ಗಳ ಮನೆಗಳನ್ನು ತಪಾಸಣೆ ಮಾಡಲಾಗಿರುತ್ತದೆ.
ಈ ಮಾಹಿತಿಯನ್ನು ಅರಿತ ಮೇಲ್ಕಂಡ ಪ್ರಕರಣದ ಆರೋಪಿಗಳು ತಮ್ಮ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು, ಬಳ್ಳಾರಿ ಬಿಟ್ಟು ಬೇರೆ ಪರಾರಿಯಾಗಿರುತ್ತಾದು ತಾಂತ್ರಿಕ ಸಹಾಯದಿಂದ ನಿರಂತರ ಪತ್ತೆ ಕಾರ್ಯ ಕೈಗೊಂಡು, ಕೊಪ್ಪಳ ಜಿಲ್ಲೆಯ ಕನಕಗಿರಿ ಹತ್ತಿರ ಸ್ಥಳೀಯ ಪೊಲೀಸರ ಸಹಕಾರದಿಂದ ಈ ದಿನ ದಿನಾಂಕ 09/10/2026 ರಂದು ಬೆಳಿಗ್ಗೆ 05 ಜನ ಆರೋಪಿಗಳನ್ನು ವಶಕ್ಕೆ ಪಡೆದು ಗಾಂಧಿನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡಿ 05 ಜನರನ್ನು ದಸ್ತಗಿರಿ ಮಾಡಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ದಸ್ತಗಿರಿ ಆದ ಆರೋಪಿಗಳ ವಿಚಾರಣೆಯಲ್ಲಿ ಮೇಲ್ಕಂಡ ಪ್ರಕರಣದಲ್ಲಿ ಒಟ್ಟು 09 ಜನರು ಸೇರಿ ಕೃತ್ಯವನ್ನು ಮಾಡಿರುವ ಮಾಹಿತಿ ತಿಳಿದು ಬಂದಿರುತ್ತದೆ. ಇನ್ನೂ 04 ಜನರು ಪರಾರಿಯಾಗಿದ್ದು, ಸದರಿ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.ದಸ್ತಗಿರಿ ಮಾಡಿದ ಆರೋಪಿಗಳ ವಿವರ : ಸತೀಶ ತಂದೆ ವೆಂಕಣ್ಣ ವ:34 ವರ್ಷ, ಕಮ್ಮ ಜನಾಂಗ, ಫೈನಾನ್ಸ್ ಕೆಲಸ, ವಾಸ: ತಾಳೂರು ರಸ್ತೆ, ಬಳ್ಳಾರಿ. ವಿಕ್ರಮ್ ಅ ವಿಕ್ಕಿ ತಂದೆ ಚಂದ್ರಹಾಸ, ವ:33 ವರ್ಷ, ಕಮ್ಮ ಜನಾಂಗ, ವಾಸ:ತಾಳೂರು ರಸ್ತೆ, ಬಳ್ಳಾರಿ. ರವಿ ಅ ಡೀಲ್ ರವಿ ತಂದೆ ಬಂಡೇಗೌಡ ವ:36 ವರ್ಷ, ಅಂಗಾಯ್ವರು, ವಾಸ: ಬೆಳಗಲ್ ಕ್ರಾಸ್, ಬಳ್ಳಾರಿ. ಶಕ್ಸಾವಲಿ ತಂದೆ ಮಸ್ತಾನ್ ವ: 28 ವರ್ಷ, ಮುಸ್ಲಿಂ ಜನಾಂಗ, ವಾಸ: ಬಸವನಕುಂಟೆ, ಬಳ್ಳಾರಿ. ಕಲೀಲ್ ಬಾಷಾ ತಂದೆ ಸಾಧಿಕ್ ಬಾಷ ವ: 28 ವರ್ಷ, ವಾಸ ಇಂದಿರಾನಗರ, ಬಳ್ಳಾರಿ ಇವರುಗಳನ್ನು ಘಟನೆಯ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧನ ಸಮಯದಲ್ಲಿ ಅಲ್ಲಿಕೋರರಿಂದ ಒಂದು ಕಾರು, ಮತ್ತು 3 ಮೋಟಾರ್ ಸೈಕಲ್ಗಳು, ದೂರುದಾರರಿಗೆ ಹೊಡೆಯಲು ಬಳಸಿದ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ, ಆರೋಪಿ-1 ಸತೀಶ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ಹಾಗೂ ಆರೋಪಿ-3 ರವಿ ಅ ಡೀಲ್ ರವಿ ಈತನ ಮೇಲೆ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಹಾಳೆ ಇದ್ದು, ಈತನ ಮೇಲೆ ಕೊಲೆ, ರಾಬರಿ, ಗ್ಯಾಂಬ್ಲಿಂಗ್, ಹಲ್ಲೆ ಸೇರಿದಂತೆ 5 ಪ್ರಕರಣಗಳು ದಾಖಲಾಗಿರುತ್ತದೆ. ರಾತ್ರಿ ಬಳ್ಳಾರಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಜನ ರೌಡಿ ಆಸಾಮಿಗಳ ಮನೆಗಳನ್ನು ಪತಾಸಣೆ ಕೈಗೊಂಡಿರುತ್ತದೆ.
ಈ ವೇಳೆ ಯಾವುದೇ ಅ ಚಟುವಟಿಕೆ ವಸ್ತುಗಳು ಕಂಡು ಸದರಿ ಮೇಲ್ಕಂಡ ಪ್ರಕರಣವನ್ನು ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷ ಮಾರ್ಗದರ್ಶನದಲ್ಲಿ, ಗೋವಿಂದ ರಾಜುಲು, ಬಿ.ಡಿ.ಎಸ್.ಪಿ ಬಳ್ಳಾರಿ ನಗರ, ಪಿ.ಬಿ ಗಳದ ರವಿಚಂದ್ರನ್ ಡಿ.ಐ. ಮಹಂತೇಶ್, ಮೊಹಮ್ಮದ್ ರಫೀಕ್ ಹಾಗೂ ಅಪರಾಧ ಸಿಬ್ಬಂದಿಗಳು ಪತ್ತೆ ಮಾಡಿರುತ್ತಾರೆ. ಸದರಿ ತಂಡದ ಕಾರ್ಯವನ್ನು ಎಸ್ ಪಿ ಸುಮನ್ ಡಿ ಬನ್ನಿಕರ್ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.