ಬಳ್ಳಾರಿ

ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಬಳ್ಳಾರಿಯಲ್ಲಿ ನಡೆಸಿ : ಪುರುಷೋತ್ತಮ್ ಗೌಡ ಒತ್ತಾಯ

ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಬಳ್ಳಾರಿಯಲ್ಲಿ ನಡೆಸಿ : ಪುರುಷೋತ್ತಮ್ ಗೌಡ ಒತ್ತಾಯ
Hold the Tungabhadra Reservoir Irrigation Advisory Committee meeting in Ballari: Purushotham Gowda


ಬಳ್ಳಾರಿ. ಅ. 08 : ತುಂಗಭದ್ರಾ ಜಲಾಶಯದಿಂದ ಬಳ್ಳಾರಿ ರೈತರಿಗೆ ಪ್ರತಿ ವರ್ಷವೂ ನೀರು ಒದಗಿಸುವಲ್ಲಿ ಅನ್ಯಾಯವಾಗುತ್ತಿದ್ದು ಇದನ್ನು ಸರಿಪಡಿಸಲು ಜಲಾಶಯ ಸಮಿತಿಯಿಂದ ಸಲಹಾ ಸಮಿತಿ ಸಭೆಯನ್ನು ಬಳ್ಳಾರಿಯಲಿ ನಡೆಸಿ  ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ ದರು ಪುರುಷೋತ್ತಮ್ ಗೌಡ ಒತ್ತಾಯಿಸಿದರು. ಈ ವಿಷಯದ ಕುರಿತು ಇಂದು ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ತುಂಗಭದ್ರಾ ಸಂಘಟನೆಯ ಪದಾಧಿಕಾರಿಗಳು ಮತ್ತು ರೈತರು, ಕಳೆದ ತಿಂಗಳು ನಡೆದ ತುಂಗಭದ್ರಾ ಜಲಾಶಯದ  ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ  ಜಲಾಶಯದಲ್ಲಿ 82 ಟಿಎಂಸಿ ನೀರು ಇದ್ದು, ಜಲಾಶಯಕ್ಕೆ ಆ ದಿನ 30,000 ಕ್ಯೂಸೆಕ್ಸ್‌ ನೀರು ಒಳಹರಿವು ಇತ್ತು. ಸಭೆಯಲ್ಲಿ ಕರ್ನಾಟಕ, ಆಂಧ್ರ​‍್ರದೇಶ ಮತ್ತು ತೆಲಂಗಾಣ ಒಟ್ಟಾರೆಯಾಗಿ ನಿತ್ಯವೂ ಎಲ್ಲಾ ಕಾಲುವೆಗಳುಮತ್ತು ತುಂಗಭದ್ರಾ ನದಿ ಸೇರಿ ದಿನಕ್ಕೆ 9000 ಕ್ಯೂಸೆಕ್ಸ್‌ ನೀರು ಬಳಸಬೇಕೆಂದು ತೀರ್ಮಾನಿಸಲಾಗಿತ್ತು.ಆದರೆ  ಈ ಪೈಕಿ ನೀರಿನ ಕೊರತೆ ಇರುವುದರಿಂದ ಕಾರ್ಖಾನೆಗಳಿಗೆ  ನೀರು ಕೊಡುವುದಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.  


ಸುದ್ದಿ ಓದಿ