8 ವರ್ಷ ಪೂರೈಸಿದ ನರೇಂದ್ರ ಮೋದಿ ಸರ್ಕಾರ
ನವದೆಹಲಿ: ಮೇ 26: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು 8 ವರ್ಷಗಳು ಸಂದಿವೆ. ಮೋದಿ ಸರ್ಕಾರಕ್ಕೆ ಕೂ ಮೂಲಕ ರಾಜಕೀಯ ಮುಖಂಡರು, ಗಣ್ಯರು ಶುಭಾಶಯ ಕೋರಿದ್ದಾರೆ.
ಪ್ರಧಾನಿ ಮೋದಿ ಸರ್ಕಾರ ಇಂದಿಗೆ 8 ವರ್ಷ ಪೂರ್ಣಗೊಳಿಸಿದೆ. ಅಭಿವೃದ್ಧಿಯ ಪಥದಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ಮೋದಿ ಸರ್ಕಾರಕ್ಕೆ ಅಭಿನಂದನೆಗಳು ಎಂದು ಸಚಿವ ಆನಂದ್ ಸಿಂಗ್ ಕೂ ಮಾಡಿದ್ದಾರೆ.
ಪ್ರಧಾನಿಯಾಗಿ ಶ್ರೀ ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ 8 ವರ್ಷ ಪೂರ್ಣಗೊಂಡಿದೆ. ಅಭಿವೃದ್ಧಿಯ ಪಥದಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ಮೋದಿ ಸರ್ಕಾರಕ್ಕೆ ಅಭಿನಂದನೆಗಳು ಎಂದು ಕೂ ಮೂಲಕ ಬಿಜೆಪಿ ಶುಭಾಶಯ ಕೋರಿದೆ