ಅಂತರರಾಷ್ಟ್ರೀಯ

ಸ್ಪೀಕರ್ ಆಗಿ ನ್ಯಾನ್ಸಿ ಪೆಲೋಸಿ ಮರು ಆಯ್ಕೆ, ಬೈಡೆನ್ ಅಭಿನಂದನೆ

ಸ್ಪೀಕರ್ ಆಗಿ ನ್ಯಾನ್ಸಿ ಪೆಲೋಸಿ ಮರು  ಆಯ್ಕೆ, ಬೈಡೆನ್ ಅಭಿನಂದನೆ

ವಾಷಿಂಗ್ಟನ್,ನವೆಂಬರ್ 19: ಅಮೆರಿಕದ ನಿಯೋಜಿತ ಅದ್ಯಕ್ಷ  ಅಧ್ಯಕ್ಷ ಜೋ ಬೈಡನ್  ಆಡಳಿತದಲ್ಲಿ ಜನಪ್ರತಿನಿಧಿ ಸಭೆಯ ಸ್ಪೀಕರ್ ಆಗಿ ನ್ಯಾನ್ಸಿ ಪೆಲೋಸಿ ಅವರನ್ನು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಮತ್ತೊಂದು ಅವಧಿಗೆ ನಾಮನಿರ್ದೇಶನ ಮಾಡಿದ್ದಾರೆ.

 

ಕ್ಯಾಲಿಫೋರ್ನಿಯಾದ  ಡೆಮಾಕ್ರಟಿಕ್ ಸದಸ್ಯೆ ನ್ಯಾನ್ಸಿ ಅವರ ಪರವಾಗಿ ಡೆಮಾಕ್ರಟಿಕ್ ಸದಸ್ಯರು  ಧ್ವನಿ ಮತದ ಮೂಲಕ ಆಯ್ಕೆ ಮಾಡಿದರು.

 ಈ ಮೂಲಕ ಇನ್ನೂ ಎರಡು ವರ್ಷಗಳವರೆಗೆ ಅವರೆ ಸ್ಪೀಕರ್ ಆಗಿ ಮುಂದುವರೆಯಲಿದ್ದಾರೆ. ಎಂದು ಘೋಷಿಸಲಾಗಿದೆ. .

'ಆರ್ಥಿಕತೆ, ಆರೋಗ್ಯ ಕ್ಷೇತ್ರ ಮತ್ತು ನೀತಿ ನಿರೂಪಣೆಗಳು ಪಾರದರ್ಶಕವಾಗಿರಬೇಕು ಮತ್ತು ಎಲ್ಲರಿಗೂ  ನ್ಯಾಯ ಒದಗಿಸುವುದು ನಮ್ಮೆಲ್ಲರ ಮುಖ್ಯ ಗುರಿಯಾಗಬೇಕು ಎಂದು ಮತದಾನದ ಬಳಿಕ ನ್ಯಾನ್ಸಿ ತಮ್ಮ ಸಹೋದ್ಯೋಗಿಗಳಿಗೆ ಹೇಳಿದರು.  ಜೋ ಬೈಡನ್ ಒಬ್ಬ ಏಕೀಕರಣವಾದಿ. ಹೀಗಾಗಿ ನಮ್ಮ ಕೆಲಸ  ಸುಗಮವಾಗಲಿದೆ ಎಂಬ ಆಶಾ ಭಾವನೆಯನ್ನು  ಅವರು ವ್ಯಕ್ತಪಡಿಸಿದರು. ಮತ್ತೊಂದು  ಅವಧಿಗೆ ಮರು  ಆಯ್ಕೆಯಾಗಿರುವುದಕ್ಕೆ ನಿಯಯೋಜಿತ ಅಧ್ಯಕ್ಷ  ಜೋ ಬೈಡನ್ ಅಭಿನಂದನೆ ಸಲ್ಲಿಸಿದ್ದಾರೆ. 

ಸುದ್ದಿ ಓದಿ