ಆರೋಗ್ಯಕರ ಬೆಳವಣಿಗೆಗೆ ಸಂಗೀತದ ಆಲನೆ ಅವಶ್ಯಕ: ಪ್ರಕಾಶ ಪೂಜಾರ
Music is essential for healthy growth: Prakash Pujara
ಆರೋಗ್ಯಕರ ಬೆಳವಣಿಗೆಗೆ ಸಂಗೀತದ ಆಲನೆ ಅವಶ್ಯಕ: ಪ್ರಕಾಶ ಪೂಜಾರ
ರಾಣೇಬೆನ್ನೂರು 06: ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿ ಹರಿಕಾರರು. ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಹಾಗೂ ಆರೋಗ್ಯಕರ ಬೆಳವಣಿಗೆಗೆ ನಿತ್ಯವೂ ಸಂಗೀತದ ಆಲನೆ ಮತ್ತು ಅವಶ್ಯವಾಗಿದೆ ಎಂದು ನಗರಸಭಾ ಸದಸ್ಯ ಪ್ರಕಾಶ ಪೂಜಾರ ಹೇಳಿದರು. ಅವರು, ಇಲ್ಲಿನ ಕಸಾಪ,ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜತ ಮಹಾದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ಆಯೋಜಿಸಲಾಗಿದ್ಧ, ಸುಗಮ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತಿ ಸಂಸ್ಕಾರ ಪ್ರತಿಯೊಬ್ಬ ಮಾನವನ ಅವಿಭಾಜ್ಯ ಅಂಗವಾಗಬೇಕು. ಕಲೆ ಮತ್ತು ಕಲಾವಿದರು ಉಳಿದು ಬೆಳೆಯಬೇಕಾದರೆ ಸಂಗೀತಾಭಿಮಾನಿಗಳು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದಾಗಿ ಸಹಕಾರ ನೀಡಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು. ಗಾನಯೋಗಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ, ಹಾಗೂ ಡಾ, ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಶ್ರೀಮತಿ ಮಹಾದೇವಕ್ಕ ಸಾವಕ್ಕಳವರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಚಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ಜಾನು ವಾದ್ಯ ವೃಂದದ ದಿವ್ಯ ಮಹೇಶ್ ಕಲಾವಿದ ಬಸವರಾಜ ಸಾವಕ್ಕನವರ, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ನಂತರ ನಡೆದ ನಾಡಿನ ಖ್ಯಾತ ಕಲಾವಿದರಾದ ರೇವಣಪ್ಪ ಮಾಳಗಿ( ಸುಗಮ ಸಂಗೀತ), ಜಯಶ್ರೀ ಕಾಳಿ ( ಜನಪದ ಸಂಗೀತ) ಹಾಗೂ ಶಿವಪ್ಪ ಚಲವಾದಿ ಕ್ಲಾರಿನೆಟ್ ವಾದನ ಪ್ರೇಕ್ಷಕರ ಗಮನ ಸೇಳೆದವು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 