ಅಂತರರಾಷ್ಟ್ರೀಯ

ಜಪಾನ್‌ ನ ಅರ್ಧಕ್ಕಿಂತ ಹೆಚ್ಚು ಜನರಿಗೆ ಕೋವಿಡ್-19 ಎರಡೂ ಲಸಿಕೆ

ಜಪಾನ್‌ ನ ಅರ್ಧಕ್ಕಿಂತ ಹೆಚ್ಚು ಜನರಿಗೆ ಕೋವಿಡ್-19 ಎರಡೂ ಲಸಿಕೆ

ಟೋಕಿಯೋ, ಸೆ.12  - ಜಪಾನ್‌ ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು (50 ಪ್ರತಿಶತಕ್ಕಿಂತ ಹೆಚ್ಚು) ಜನರು ಕೊರೋನಾ ವೈರಸ್ (ಕೋವಿಡ್ -19) ಎರಡೂ ಲಸಿಕೆಗಳನ್ನು ಪಡೆದಿದ್ದಾರೆ.
 
ಜಪಾನ್‌ನ ಕೊರೋನಾ ವೈರಸ್ ಪ್ರತಿಕ್ರಿಯೆಯ ಉಸ್ತುವಾರಿ ಸಚಿವ ಯಸುತೋಶಿ ನಿಶಿಮುರಾ ಅವರು ಭಾನುವಾರ ಈ ಮಾಹಿತಿಯನ್ನು ಎನ್ಎಚ್‌ಕೆ ಬ್ರಾಡ್‌ಕಾಸ್ಟರ್‌ಗೆ ನೀಡಿದರು.
 
"ಜಪಾನ್‌ನ ಒಟ್ಟು ಜನಸಂಖ್ಯೆಯ 50 ಪ್ರತಿಶತಕ್ಕಿಂತ ಹೆಚ್ಚು ಜನರಿಗೆ ಎರಡೂ ಲಸಿಕೆಗಳನ್ನು ನೀಡಲಾಗಿದೆ. ಪ್ರಸ್ತುತ ಕರೋನಾ ಲಸಿಕೆ ಪಡೆದವರ ಪ್ರಮಾಣ ಹೀಗೆ ಮುಂದುವರಿದರೆ, ಈ ತಿಂಗಳ ಅಂತ್ಯದ ವೇಳೆಗೆ ಎರಡೂ ಲಸಿಕೆಗಳನ್ನು ಪಡೆದ ಒಟ್ಟು ಜನರ ಸಂಖ್ಯೆ ಶೇಕಡಾ 60 ಕ್ಕಿಂತ ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ನಿಶಿಮುರಾ ತಿಳಿಸಿದ್ದಾರೆ.
 
ಜಪಾನ್ ತನ್ನ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವನ್ನು ಈ ವರ್ಷದ ಫೆಬ್ರವರಿ ಮಧ್ಯದಲ್ಲಿ ಆರಂಭಿಸಿತ್ತು. ಜಪಾನ್‌ನಲ್ಲಿ ಪ್ರಸ್ತುತ ಮೂರು ಲಸಿಕೆಗಳನ್ನು ಬಳಸಲಾಗುತ್ತಿದ್ದು, ಫೈಜರ್/ಬಯೋಟೆಕ್, ಅಸ್ಟ್ರಾಜೆನೆಕಾ ಮತ್ತು ಮಾಡರ್ನಾ ಅಧಿಕೃತವಾಗಿ ಬಳಸಲಾಗುತ್ತಿದೆ.

ಸುದ್ದಿ ಓದಿ