ಜಾಗತಿಕವಾಗಿ 67 ದಶಲಕ್ಷಕ್ಕೂ ಹೆಚ್ಚು ಕೋರೋನ ಪೀಡಿತರು..!!
ಮಾಸ್ಕೋ,
ಡಿಸೆಂಬರ್ 7: ಜಗತ್ತಿನಾದ್ಯಂತ ಕೋರೋನ ಸೋಂಕು ಪೀಡಿತರ ಸಂಖ್ಯೆ 6 ಕೋಟಿ 70 ಲಕ್ಷಕ್ಕೆ ಏರಿಕೆಯಾಗಿದೆ ಎಂದು
ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೊಸ ಮಾಹಿತಿ ಹೇಳಿದೆ.
ಕೇಂದ್ರದ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಪಂಚದಾದ್ಯಂತ ದೃಡಪಡಿಸಿದ ಕೋರೋನ ಸೋಂಕಿನ ಪ್ರಕರಣಗಳ ಸಂಖ್ಯೆ 67 ಮಿಲಿಯನ್ ಮೀರಿದೆ. ಸೋಮವಾರ ದವರೆಗೆ ಬಂದಿರುವ ವರದಿಗಳ ಪ್ರಕಾರ ವಿಶ್ವದಲ್ಲಿ 67,004,543 ದೃಡಪಡಿಸಿದ ಕರೋನ ಪ್ರಕರಣಗಳು ದಾಖಲಾಗಿವೆ.
ಈವರೆಗೆ ಜಾಗತಿಕವಾಗಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,535,038 ಆಗಿದೆ. ಚೇತರಿಸಿಕೊಂಡ ವ್ಯಕ್ತಿಗಳ ಸಂಖ್ಯೆ 43,032,444ಕ್ಕೆ ತಲುಪಿದೆ. ದೃಡಪಟ್ಟ ಕರೋನ ಸೋಂಕು ಪ್ರಕರಣಗಳ ಸಂಖ್ಯೆಯ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ ನಂತರ , ಭಾರತ ಮತ್ತು ಬ್ರೆಜಿಲ್ ಮೊದಲ ಮೂರು ರಾಷ್ಟ್ರಗಳಿವೆ. 2.4 ಮಿಲಿಯನ್ ಪ್ರಕರಣ ದಾಖಲಿಸಿರುವ ರಷ್ಯಾ ಸದ್ಯ ನಾಲ್ಕನೇ ಸ್ಥಾನದಲ್ಲಿದೆ ಎಂದೂ ವರದಿ ಹೇಳಿದೆ.