ಅಂತರರಾಷ್ಟ್ರೀಯ

ಕೋವಿಡ್‍-19ನಿಂದ ವಿಶ್ವಾದ್ಯಂತ 17.5 ಲಕ್ಷಕ್ಕೂ ಹೆಚ್ಚು ಮಂದಿ ಸಾವು - ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ

ಕೋವಿಡ್‍-19ನಿಂದ ವಿಶ್ವಾದ್ಯಂತ 17.5 ಲಕ್ಷಕ್ಕೂ ಹೆಚ್ಚು ಮಂದಿ ಸಾವು  - ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ

ಮಾಸ್ಕೋ, ಡಿಸೆಂಬರ್ 26 (ಸ್ಪುಟ್ನಿಕ್)- ಕೊರೋನವೈರಸ್‌ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ  17.5 ಲಕ್ಷ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಶನಿವಾರದವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 17,50,057ಕ್ಕೆ ಏರಿದೆ.

ಈ ಮಧ್ಯೆ, ವಿಶ್ವದಾದ್ಯಂತ ಕೋವಿಡ್‍-19 ಸೋಂಕಿನ ಪ್ರಕರಣಗಳ ಸಂಖ್ಯೆ 7.98 ಕೋಟಿಗೆ ಏರಿದೆ ಎಂದು ವಿಶ್ವವಿದ್ಯಾಲಯದ ಅಂಕಿ ಅಂಶಗಳು ತಿಳಿಸಿವೆ.

ಸಾಂಕ್ರಾಮಿಕ ರೋಗದಿಂದ ಅಮೆರಿಕ, ಭಾರತ ಮತ್ತು ಬ್ರೆಜಿಲ್ ಹೆಚ್ಚು ಭಾದಿತ ದೇಶಗಳಾಗಿವೆ.

ಇದರ ಮಧ್ಯೆ, ಯೂರೋಪ್‍ನ ಕೆಲ ದೇಶಗಳು ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‍-19ರ ಹೊಸ ರೂಪಾಂತರ ಕಂಡು ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಯೂರೋಪ್‍ನ 9 ದೇಶಗಳಲ್ಲಿ ಕೋವಿಡ್‍ನ ಹೊಸ ಸ್ವರೂಪ ಕಂಡು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ್ದು, ರಕ್ಷಣಾತ್ಮಕ ಕ್ರಮಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದೆ. 

ಸುದ್ದಿ ಓದಿ