ಅಮೆರಿಕಾದಲ್ಲಿ ಟೊರ್ನಡೊ ಅವಾಂತರ.. 100ಕ್ಕೂ ಹೆಚ್ಚುಮಂದಿ ಸಾವು
ಟೆನ್ನೆಸ್ಸೀ, ಡಿ 11: ಅಮೆರಿಕಾದಲ್ಲಿ ಸುಂಟರಗಾಳಿ ಭಾರಿ ಅವಾಂತರ ಸೃಷ್ಟಿಸಿದೆ. ಕೆಂಟುಕಿ ರಾಜ್ಯದಲ್ಲಿ ಸುಂಟರಗಾಳಿಗೆ 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಆ ರಾಜ್ಯದ ಗವರ್ನರ್ ಆಂಡಿ ಬೆಸ್ಚಿರ್ ಹೇಳಿಕೆ ನೀಡಿದ್ದಾರೆ.
ಕೆಂಟುಕಿ ರಾಜ್ಯದ ಇತಿಹಾಸದಲ್ಲಿ ಅತ್ಯಂತ ತೀವ್ರವಾದ ಸುಂಟರಗಾಳಿಯಾಗಿದ್ದು, ಸುಂಟರಗಾಳಿಯಿಂದ ಬಹಳಷ್ಟು ಮನೆಗಳು ನೆಲಕಚ್ಚಿವೆ. ಇದರೊಂದಿಗೆ ಅಲ್ಲಿ ಪರಿಹಾರ ಕಾರ್ಯಾಚರಣೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಯುಎನ್ ಐ ಕೆವಿಆರ್ 18.29