ಅಂತರರಾಷ್ಟ್ರೀಯ

ಅಮೆರಿಕ ತಲುಪಿದ 100ಕ್ಕೂ ಹೆಚ್ಚು ಅಫ್ಗಾನರಿಗೆ ಭಯೋತ್ಪಾದಕ ನಂಟು

ಅಮೆರಿಕ ತಲುಪಿದ  100ಕ್ಕೂ ಹೆಚ್ಚು ಅಫ್ಗಾನರಿಗೆ ಭಯೋತ್ಪಾದಕ ನಂಟು

ವಾಷಿಂಗ್ಟನ್, ಸೆ 4  ತಾಲಿಬಾನ್‌ ಆಕ್ರಮಿತ ಅಫ್ಘಾನಿಸ್ತಾನದಿಂದ ಅಮೆರಿಕಕ್ಕೆ  ವಲಸೆ ಬಂದಿರುವ 30,000 ಕ್ಕಿಂತ ಹೆಚ್ಚು ಜನರಲ್ಲಿ ಸುಮಾರು 100 ಅಘ್ಗಾನ್ ಪ್ರಜೆಗಳು ತಾಲಿಬಾನ್‌ ಅಥವಾ ಇತರ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಗಳನ್ನು ಗುರುತಿಸಲಾಗಿದೆ.
ಶುಕ್ರವಾರದ ಮಾಧ್ಯಮಗಳ ವರದಿ ಪ್ರಕಾರ, ಅಮೆರಿಕ ಅಧಿಕಾರಿಗಳು ಈ 100 ಜನರನ್ನು ಗುರುತಿಸಿದ್ದು, ಈ ಪೈಕಿ ಇಬ್ಬರನ್ನು ಹೆಚ್ಚಿನ ಹಿನ್ನೆಲೆ ತನಿಖೆಗಾಗಿ ಕೊಸೊವೊಗೆ ಕಳುಹಿಸಲಾಗುವುದು.
ಜೊತೆಗೆ, ಇನ್ನೂ  ಸುಮಾರು 10,000 ಜನರ ಕುರಿತು ಹೆಚ್ಚುವರಿ ಪರಿಶೀಲನೆಯ ಅಗತ್ಯವಿದೆ. ಕೆಲವು ವ್ಯಕ್ತಿಗಳನ್ನು ಹಿಂದೆ ಕ್ರಿಮಿನಲ್ ಅಪರಾಧಗಳಿಗಾಗಿ ಅಮೆರಿಕದಿಂದ ಗಡಿಪಾರು ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಇವರ ಕುರಿತು ಏನು ಮಾಡಬೇಕೆಂದು ಅಲ್ಲಿನ ಹೋಂಲ್ಯಾಂಡ್‌ ಸೆಕ್ಯೂರಿಟಿ ಪಡೆ ಇನ್ನೂ ನಿರ್ಧರಿಸಿಲ್ಲ.
ನ್ಯಾಯಾಂಗ ಇಲಾಖೆಯು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ ಮತ್ತು ವರದಿಯ ಪ್ರಕಾರ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಕೂಡ ಪ್ರತಿಕ್ರಿಯಿಸಿಲ್ಲ.

ಸುದ್ದಿ ಓದಿ