ಅಂತರರಾಷ್ಟ್ರೀಯ

ಓಮಿಕ್ರಾನ್‌ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಲಭ್ಯವಾಗಬೇಕಿದೆ; ವಿಶ್ವ ಆರೋಗ್ಯ ಸಂಸ್ಥೆ

ಓಮಿಕ್ರಾನ್‌   ಬಗ್ಗೆ  ಇನ್ನೂ   ಹೆಚ್ಚು ಮಾಹಿತಿ ಲಭ್ಯವಾಗಬೇಕಿದೆ; ವಿಶ್ವ ಆರೋಗ್ಯ ಸಂಸ್ಥೆ

ಜಿನೀವಾ, ನ.  29 - ಡೆಲ್ಟಾ ಸೇರಿದಂತೆ    ಇತರ  ಕೋವಿಡ್‌    ರೂಪಾಂತರಿಗಳಿಗೆ ಹೋಲಿಸಿದರೆ   ಓಮಿಕ್ರಾನ್‌    ತೀವ್ರವಾಗಿ  ಪ್ರಸರಣಗೊಳ್ಳುವ   ಅಥವಾ  ಗಂಭೀರ   ರೋಗವನ್ನು ಉಂಟುಮಾಡಲಿದೆಯೇ   ಎಂಬುದು   ಇನ್ನೂ ಸ್ಪಷ್ಟವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.   

ಇತರ  ರೂಪಾಂತರಗಳಿಗೆ ಹೋಲಿಸಿದರೆ ಓಮಿಕ್ರಾನ್ ವ್ಯಕ್ತಿಯಿಂದ  ವ್ಯಕ್ತಿಗೆ ಸುಲಭವಾಗಿ ಹರಡುತ್ತದೆಯೇ ಎಂಬುದು  ಇನ್ನೂ ಸ್ಪಷ್ಟವಾಗಿಲ್ಲ ಎಂದು  ಡಬ್ಲ್ಯುಎಚ್‌ ಓ  ಭಾನುವಾರ ಹೇಳಿದೆ.  ಈ ರೂಪಾಂತರಿ  ಕಂಡುಬಂದಿರುವ    ದಕ್ಷಿಣ ಆಫ್ರಿಕಾದಲ್ಲಿ    ನಡೆಸಲಾಗುತ್ತಿರುವ   ಪರೀಕ್ಷೆಯಲ್ಲಿ  ಹೆಚ್ಚಿನ ಸಂಖ್ಯೆಯ  ಜನರಿಗೆ  ಪಾಸಿಟಿವ್‌   ಕಂಡುಬರುತ್ತಿದೆ. 

ಹೆಚ್ಚಿನ  ಜನರರಲ್ಲಿ   ಹೊಸ ತಳಿಯ  ಸೋಂಕು ಕಂಡುಬರುತ್ತಿದ್ದರೂ,   ಓಮಿಕ್ರಾನ್‌  ಗಂಭೀರ   ಆನಾರೋಗ್ಯ   ಸೃಷ್ಟಿಸಲಿದೆಯೇ   ಎಂಬುದು ಇನ್ನೂ ಸ್ಪಷ್ಟವಾಗಿಲ್ಲ,  ಆದರೆ ಪ್ರಾಥಮಿಕ ಮಾಹಿತಿಯಂತೆ,  ದಕ್ಷಿಣ ಆಫ್ರಿಕಾದಲ್ಲಿ  ಆಸ್ಪತ್ರೆಗಳಿಗೆ    ದಾಖಲಾಗುವ  ಪ್ರಮಾಣ ಹೆಚ್ಚುತ್ತಿದೆ.   ಆದರೆ  ಇದು     ಹೆಚ್ಚಿನ ಸಂಖ್ಯೆಯ   ಜನರು ಸೋಂಕಿಗೆ ಒಳಗಾಗುತ್ತಿರುವ  ಕಾರಣದಿಂದಲೂ  ಇರಬಹುದು  ಎಂದು ಹೇಳಿದೆ.         

ಓಮಿಕ್ರಾನ್‌   ತಳಿಯ       ರೋಗಲಕ್ಷಣಗಳು   ಇತರ ರೂಪಾಂತರಿಗಳಿಗಿಂತ ಭಿನ್ನವಾಗಿವೆ ಎಂದು ಸೂಚಿಸಲು ಈಗ ಯಾವುದೇ  ಮಾಹಿತಿಯಿಲ್ಲ ಎಂದು  WHO ದೃಢಪಡಿಸಿದೆ.  ಹೊಸ ರೂಪಾಂತರಿಯ  ತೀವ್ರತೆ ಮಟ್ಟ  ಅರ್ಥಮಾಡಿಕೊಳ್ಳಲು  ಹಲವು  ವಾರಗಳು  ಬೇಕು.  ಪ್ರಸ್ತುತ ಪ್ರಪಂಚದಾದ್ಯಂತ ಪ್ರಬಲವಾಗಿರುವ ಡೆಲ್ಟಾ ರೂಪಾಂತರಿ  ಒಳಗೊಂಡಂತೆ COVID-19 ನ ಎಲ್ಲಾ ರೂಪಾಂತರಿಗಳು   ತೀವ್ರವಾದ ಕಾಯಿಲೆ ಅಥವಾ ಸಾವಿಗೆ ಕಾರಣವಾಗಬಹುದು,  ವಿಶೇಷವಾಗಿ  ಅತ್ಯಂತ ದುರ್ಬಲ ಜನರು ಸೋಂಕಿಗೆ  ಒಳಗಾಗದಂತೆ  ನೋಡಿಕೊಳ್ಳಬೇಕು ಎಂದು ಹೇಳಿದೆ.

ಓಮಿಕ್ರಾನ್‌  ತಳಿಯಿಂದ   ಮರು ಸೋಂಕು  ಹೆಚ್ಚುವ  ಅಪಾಯವಿದೆ ಎಂದು ಪ್ರಾಥಮಿಕ ಪುರಾವೆಗಳು ಸೂಚಿಸುತ್ತವೆ.  ಆದರೆ   ಈ  ಕುರಿತ  ಮಾಹಿತಿ  ಸೀಮಿತವಾಗಿದೆ. ಮುಂದಿನ ದಿನಗಳು ಹಾಗೂ  ವಾರಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ            ಪ್ರಸ್ತುತ ಪಿಸಿಆರ್ ಪರೀಕ್ಷೆಗಳು ಒಮಿಕ್ರಾನ್ ಅನ್ನು ಪತ್ತೆಹಚ್ಚುವುದನ್ನು ಮುಂದುವರೆಸುತ್ತವೆ,  ಆದರೆ,  ಒಮಿಕ್ರಾನ್ ರೂಪಾಂತರಿಗೆ  COVID-19 ಗೆ ಲಭ್ಯವಿರುವ ಲಸಿಕೆಗಳು  ಹಾಗೂ  ಚಿಕಿತ್ಸೆಗಳು  ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳು ಇನ್ನೂ ನಡೆಯುತ್ತಿವೆ ಎಂದು WHO ಹೇಳಿದೆ.

ಸುದ್ದಿ ಓದಿ