ಅಂತರರಾಷ್ಟ್ರೀಯ

ಅಫ್ಘನ್ ಟಿ 20 ತಂಡದ ನಾಯಕ ಮೊಹಮ್ಮದ್‌ ನಬಿ

ಅಫ್ಘನ್  ಟಿ  20  ತಂಡದ ನಾಯಕ  ಮೊಹಮ್ಮದ್‌  ನಬಿ

ಕಾಬೂಲ್‌,  ಸೆ  11: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಟಿ- 20 ನಾಯಕರಾಗಿ    ಆಲ್ ರೌಂಡರ್ ಮೊಹಮ್ಮದ್ ನಬಿ ಅವರು  ಆಯ್ಕೆಗೊಂಡಿದ್ದಾರೆ.  ಅವರು  ಟ್ವಿಟರ್ ಮೂಲಕ   ಈ  ವಿಷಯ  ತಿಳಿಸಿದ್ದಾರೆ. 

"ಈ ನಿರ್ಣಾಯಕ ಸಮಯದಲ್ಲಿ ಟಿ 20 ಮಾದರಿಯಲ್ಲಿ  ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕತ್ವ  ವಹಿಸಬೇಕೆಂದು   ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು   ಗೌರವಿಸುತ್ತೇನೆ ..  ಅಲ್ಲಾಹನ ಕೃಪೆಯಿಂದ    ಟಿ 20 ವಿಶ್ವಕಪ್ ನಲ್ಲಿ ದೇಶ   ಹೆಮ್ಮೆ ಪಡುವ  ರೀತಿ    ಪ್ರದರ್ಶನ ನೀಡಲಿದ್ದೇವೆ     ಎಂದು ನಬಿ ಟ್ವೀಟ್ ಮಾಡಿದ್ದಾರೆ.  ಟಿ 20 ವಿಶ್ವಕಪ್‌ಗಾಗಿ ಆಫ್ಘಾನಿಸ್ತಾನ ತಂಡ ಪ್ರಕಟಿಸಿದ   ನಂತರ   ರಶೀದ್ ಖಾನ್   ಅಫ್ಘಾನಿಸ್ತಾನ ತಂಡದ   ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.


ಸುದ್ದಿ ಓದಿ