ಅಂತರರಾಷ್ಟ್ರೀಯ

ಜಪಾನಿನಲ್ಲಿ ಮಕ್ಕಳೊಂದಿಗೆ ಹಿಂದಿಯಲ್ಲಿ ಮಾತನಾಡಿದ ಮೋದಿ ವಿಡಿಯೋ ವೈರಲ್

ಜಪಾನಿನಲ್ಲಿ ಮಕ್ಕಳೊಂದಿಗೆ ಹಿಂದಿಯಲ್ಲಿ ಮಾತನಾಡಿದ ಮೋದಿ ವಿಡಿಯೋ ವೈರಲ್

ಟೋಕಿಯೋ: ಮೇ 23: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಜಪಾನ್ ಪ್ರವಾಸ ಕೈಗೊಂಡಿದ್ದು, ಜಪಾನ್ ತಲುಪಿದ್ದಂತೆ ಭಾರತೀಯ ಸಮುದಾಯದ ಜನರು ಸ್ವಾಗತ ಕೋರಿದರು. ಅಲ್ಲಿನ ಕೆಲವು ಮಂದಿ ಮೋದಿ ಎಂಬ ಘೋಷಣೆಯೊಂದಿಗೆ ಅವರನ್ನು ಬರಮಾಡಿಕೊಂಡರು.

ಜಪಾನಿನಲ್ಲಿರುವ ಭಾರತೀಯ ಮಕ್ಕಳ ಜೊತೆ ಮೋದಿ ಅವರು ಹಿಂದಿ ಭಾಷೆಯಲ್ಲಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲಿ ನೆರೆದಿದ್ದ ಎಲ್ಲಾ ಮಕ್ಕಳೊಂದಿಗೆ ಹಿಂದಿ ಮಾತನಾಡಿದ ಅವರು, ಪ್ರತಿ ಮಕ್ಕಳ ತಲೆಯ ಮೇಲೆ ಕೈ ನೇವರಿಸಿ ಅವರು ತಂದಿದ್ದ ಚಿತ್ರಗಳಿಗಟ ಆಟೋಗ್ರಾಫ್ ಹಾಕಿದರು.

ಮಕ್ಕಳೊಂದಿಗೆ ಸಮಯ ಕಳೆದದ್ದನ್ನು ಮೋದಿ ಅವರು ಭಾರತೀ ಸಮುದಾಯದೊಂದಿಗೆ, ಮಕ್ಕಳೊಂದಿಗಿನ ಫೋಟೋಗಳನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸೋಮವಾರ ಮತ್ತು ಮಂಗಳವಾರ (ಮೇ೨೪) ಜಪಾನಿಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿಡಾ ಅವರ ಆಹ್ವಾನ ಮೇರೆಗೆ ಜಪಾನ್ ಪ್ರವಾಸ ಕೈಗೊಂಡಿದ್ದು, ಟೋಕಿಯೋ ತಲುಪಿದ್ದಾರೆ. ಕಳೆದ ೮ ವರ್ಷಗಳಲ್ಲಿ ೫ನೇ ಬಾರಿಗೆ ಜಪಾನ್ ಗೆ ಭೇಟಿ ನೀಡುತ್ತಿರುವ ಮೋದಿ ಅವರು ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿ ಅಲ್ಲಿನ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಸುದ್ದಿ ಓದಿ