ಎರಡು ದಿನ ಜಪಾನ್ ಪ್ರವಾಸ ಕೈಗೊಂಡ ಮೋದಿ
ಟೋಕಿಯೋ: ಮೇ 23: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಜಪಾನ್ ಪ್ರವಾಸ ಕೈಗೊಂಡಿದ್ದು, ಜಪಾನ್ ತಲುಪಿದ್ದಾರೆ.
ಕಳೆದ 8 ವರ್ಷಗಳಲ್ಲಿ 5ನೇ ಬಾರಿಗೆ ಜಪಾನ್ ಗೆ ಭೇಟಿ ನೀಡುತ್ತಿರುವ ಮೋದಿ ಅವರು ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿ ಅಲ್ಲಿನ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಸೋಮವಾರ (ಮೇ 23) ಮತ್ತು ಮಂಗಳವಾರ (ಮೇ 24) ಜಪಾನಿಗೆ ಭೇಟಿ ನೀಡಿದ ಮೋದಿ ಅವರಿಗೆ ಜಪಾನಿನಲ್ಲಿನ ಭಾರತೀಯ ಸಮುದಾಯವು ಭವ್ಯ ಸ್ವಾಗತ ಕೋರಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿಡಾ ಅವರ ಆಹ್ವಾನ ಮೇರೆಗೆ ಜಪಾನ್ ಪ್ರವಾಸ ಕೈಗೊಂಡಿದ್ದು, ಟೋಕಿಯೋ ತಲುಪಿದ್ದಾರೆ.
ಮಕ್ಕಳೊಂದಿಗೆ ಮಾತನಾಡಿದ ಮೋದಿ ಅವರು, ಅವರೊಟ್ಟಿಗೆ ಕೆಲ ಸಮಯ ಕಳೆದರು. ಮಕ್ಕಳು ತಂದಿದ್ದ ಚಿತ್ರಕಲೆಗೆ ಸಹಿ ಹಾಕುವ ಮೂಲಕ ಮಕ್ಕಳ ಸಂತೋಷದಲ್ಲಿ ಪಾಲ್ಗೊಂಡರು.