ಮೋದಿಗೆ ಪಾಕ್ ಬಗ್ಗೆ ತಂತ್ರಗಾರಿಕೆ ಇಲ್ಲ: ರಾಹುಲ್
ಹೊಸದಿಲ್ಲಿ 24: 'ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ಥಾನದ ವಿಷಯದಲ್ಲಿ ಆಳವಾದ ಆಲೋಚನೆಯ ತಂತ್ರಗಾರಿಕೆಯನ್ನು ಅನುಸರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಆರೋಪಿಸಿದ್ದಾರೆ.
ಒಂದು ದಿನದ ಹಿಂದಷ್ಟೆ ರಾಹುಲ್ ಗಾಂಧಿ, "ಬಿಜೆಪಿ ಮತ್ತು ಆರ್ಎಸ್ಎಸ್ ಭಾರತದಲ್ಲಿ ದ್ವೇಷ ಹರಡುತ್ತಿವೆ' ಎಂದು ಆರೋಪಿಸುವ ಮೂಲಕ ವಿವಾದವೆಬ್ಬಿಸಿದ್ದರು.
ಲಂಡನ್ನ 'ಅಂತಾರಾಷ್ಟ್ರೀಯ ವ್ಯೂಹಗಾರಿಕೆ ಅಧ್ಯಯನ ಕೇಂದ್ರ ದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕ್ ವಿಷಯದಲ್ಲಿ ಯಾವುದೇ ಕ್ರಮಬದ್ಧ ತಂತ್ರಗಾರಿಕೆ ಇದ್ದಂತೆ ಕಾಣುವುದಿಲ್ಲ. ಪಾಕಿಸ್ಥಾನದ ಜತೆಗೆ ವ್ಯವಹರಿಸುವುದು ತುಂಬ ಕಷ್ಟ, ಏಕೆಂದರೆ ಅಲ್ಲಿ ಯಾವುದೇ ಒಂದು ಸಮ್ಮಿಳಿತ ಅಧಿಕಾರ ಪಾರಮ್ಯದ ಕೇಂದ್ರ ಎಂಬುದಿಲ್ಲ. ಆದುದರಿಂದ ಪಾಕಿಸ್ಥಾನದವರು ತಾವೇ ಅಂತಹ ಸಮ್ಮಿಳಿತ ಪರಮೋಚ್ಚ ಸಂರಚನೆಯನ್ನು ರೂಪಿಸಿಕೊಂಡು ಮುಂದೆ ಬರುವುದನ್ನು ನಾವು ಕಾಯಬೇಕಾಗುತ್ತದೆ' ಎಂದು ಹೇಳಿದರು.
ಭಾರತ - ಚೀನ ಸೇನೆಯ ನಡುವಿನ ಸುದೀರ್ಘ ಮುಖಾಮುಖೀಗೆ ಕಾರಣವಾದ ಡೋಕ್ಲಾಂ ವಿಷಯವನ್ನು ಕೂಡ ಕೇಂದ್ರ ಸರಿಯಾಗಿ ನಿರ್ವಹಿಸಿಲ್ಲ ಎಂದು ರಾಹುಲ್ ಮೋದಿ ಸರಕಾರವನ್ನು ಟೀಕಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 