ಮೋದಿ ಅವರ ಲೇಖನ ಜಪಾನ್ ಪತ್ರಿಕೆಯಲ್ಲಿ ಪ್ರಕಟ
ಟೋಕಿಯೊ: ಮೇ 23 : ಜಪಾನ್‌ನ ಜನಪ್ರಿಯ ಪತ್ರಿಕೆ ಯೊಮಿಯುರಿ ಶಿಂಬುನ್ ಸೋಮವಾರ ಭಾರತ-ಜಪಾನ್ ಸಂಬಂಧಗಳು ಮತ್ತು ಕಳೆದ 70 ವರ್ಷಗಳ ಪಾಲುದಾರಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಲೇಖನವನ್ನು ಪ್ರಕಟಿಸಿದೆ.
ಜಪಾನಿನಲ್ಲಿ ಪ್ರಕಟವಾದ ಈ ಲೇಖನದಲ್ಲಿ ಪ್ರಧಾನಿ ಮೋದಿ ಅವರು ಕಳೆದ ಏಳು ದಶಕಗಳಿಂದ ಉಭಯ ದೇಶಗಳ ನಡುವಿನ ರೋಮಾಂಚಕ ಸಂಬಂಧಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಎರಡೂ ದೇಶಗಳ ಪಾಲುದಾರಿಕೆ ಮುಖ್ಯವಾಗಿದೆ ಎಂದು ಬಣ್ಣಿಸಿದ್ದಾರೆ.
ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮೋದಿ, ಈ ಲೇಖನದಲ್ಲಿ ಭಾರತ ಮತ್ತು ಜಪಾನ್‌ನ ವಿಶೇಷ ಸ್ನೇಹದ ಪ್ರಯಾಣವನ್ನು ಹೈಲೈಟ್ ಮಾಡಲಾಗಿದೆ, ಇದು 70 ಅದ್ಭುತ ವರ್ಷಗಳನ್ನು ಪೂರೈಸಿದೆ ಎಂದು ಹೇಳಿದರು.