ಚುನಾವಣೆಯ ಮಾದರಿ ನೀತಿ ಸಂಹಿತೆ: ಚೆಕ್ ಪೋಸ್ಟ್ಗೆ ಜಿಲ್ಲಾಧಿಕಾರಿ ಭೇಟಿ
ಮುಂಡರಗಿ 02: 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಪಟ್ಟಣದ ಕೊಪ್ಪಳ ರೋಡ್ ಃಂಒಖ ಕಾಲೇಜು ಹತ್ತಿರ ಸ್ಥಾಪನೆ ಮಾಡಲಾಗಿರುವ ಚೆಕ್ ಪೋಸ್ಟ್ ಗೆ ಗದಗ ಜಿಲ್ಲಾಧಿಕಾರಿಗಳು ಶನಿವಾರ ಭೇಟಿ ನೀಡಿ, ಅಲ್ಲಿನ ಅಧಿಕಾರಿ/ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರೀಶೀಲನೆ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಚೆಕ್ ಪೋಸ್ಟ್ ನಲ್ಲಿ ನಿಯೋಜಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿಯೊಂದು ವಾಹನವನ್ನು ನಿಯಮನುಸಾರ ತಪಾಸಣೆ ಮಾಡಬೇಕು. ಒಂದು ವೇಳೆ ವಾಹನದಲ್ಲಿ ಅಧಿಕೃತ ದಾಖಲೆಗಳು ಇಲ್ಲದೇ ನಗದು ಹಣ, ಸಾರಾಯಿ ಇತರೆ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದರೆ, ಸಂಬಂಧಪಟ್ಟವರ ಮೇಲೆ ನಿಯಮಾನುಸಾರ ಕಾನೂನಾತ್ಮಕವಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.
ಹಾಗೂ ಇದೆ ಸಂದರ್ಭದಲ್ಲಿ ಮುಂಡರಗಿ ಪಟ್ಟಣದಲ್ಲಿ ಒಂದೇ ಕಟ್ಟಡದಲ್ಲಿ ಮೂರು ಮತಗಟ್ಟೆಗಳು ಇರುವ ಕಟ್ಟಡವನ್ನು ಪರೀಶೀಲನೆ ಮಾಡಿ ಮತದಾರರಿಗೆ ಸೂಕ್ತ ಸ್ಥಳಾವಕಾಶ ಮತ್ತು ಕನಿಷ್ಠ ಸೌಲಭ್ಯಗಳು ಇರುವುದನ್ನು ಪರೀಶೀಲನೆ ಮಾಡಿದರು. ಮತ್ತು ಪಟ್ಟಣದಲ್ಲಿ ಸಂಚರಿಸಿ ಯಾವುದಾದರೂ ಅನಧಿಕೃತ ಪೋಸ್ಟರ್ಸ ಮತ್ತು ಬ್ಯಾನರ್ಸ, ಗೋಡೆ ಬರಹ ಇದ್ದಲ್ಲಿ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಲು ಪುರಸಭೆ ಮುಖ್ಯಾಧಿಕಾರಿಗೆ ಸೂಕ್ತ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮುಂಡರಗಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್. ಪುರಸಭೆ ಮುಖ್ಯಾಧಿಕಾರಿ ಎಂ.ಎ.ನೂರುಲ್ಲಾಖಾನ, ಕಂದಾಯ ನೀರೀಕ್ಷಕರು ಹಾಗೂ ಗ್ರಾ.ಪಂ ಆಡಳಿತ ಅಧಿಕಾರಿಗಳು ಹಾಜರಿದ್ದರು.