ಡ್ರೋನ್‌ನಿಂದ ಕ್ಷಿಪಣಿ ಉಡಾವಣೆ ಯಶಸ್ವಿ
Missile launch from drone successful
ಹೊಸದಿಲ್ಲಿ 26: ಡ್ರೋನ್‌ನಿಂದ ಉಡಾಯಿಸಲಾಗುವ “ಯುಎಲ್‌ಪಿಜಿಎಂ-ವಿ3′ ಎಂಬ ನಿಖರ ಮತ್ತು ನಿರ್ದೇಶಿತ ದಾಳಿ ನಡೆಸಬಲ್ಲ ಕ್ಷಿಪಣಿಯನ್ನು ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯಶಸ್ವಿಯಾಗಿ ಪರೀಕ್ಷಿಸಿದೆ.
ವಿ3 ಕ್ಷಿಪಣಿಯು ಈ ಹಿಂದೆ ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದ ವಿ2 ಮತ್ತು ವಿ1 ಕ್ಷಿಪಣಿಗಳ ಸುಧಾರಿತ ಆವೃತ್ತಿ. ಆಕಾಶದಿಂದ (ಡ್ರೋನ್) ಭೂಮಿಯ ಮೇಲಿನ ಗುರಿಗಳ ಮೇಲೆ ದಾಳಿ ನಡೆಸುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಹಗಲು-ರಾತ್ರಿ, ಮೈದಾನ ಮತ್ತು ಎತ್ತರ ಪ್ರದೇಶದಲ್ಲಿಯೂ ಕಾರ್ಯಾಚರಿಸಬಲ್ಲ ಈ ಕ್ಷಿಪಣಿಯು ಉಡಾವಣೆಯ ಅನಂತರವೂ ಗುರಿ ಬದಲಿಸಬಲ್ಲುದು. 3 ಮಾದರಿಯ ವಿನಾಶಕಾರಿ ಸಿಡಿತಲೆಗಳನ್ನು ಈ ಕ್ಷಿಪಣಿ ಹೊತ್ತೂಯ್ಯಬಲ್ಲುದಾಗಿದೆ.
ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ನ್ಯಾಶನಲ್ ಓಪನ್ ಏರಿಯಾ ರೇಂಜ್ (ಎನ್‌ಒಎಆರ್) ಪರೀಕ್ಷಾ ಕೇಂದ್ರದಲ್ಲಿ ಬೆಂಗಳೂರು ಮೂಲದ ನವೋದ್ಯಮವಾದ ನ್ಯೂಸ್ಪೇಸ್ ರಿಸರ್ಚ್ ಟೆಕ್ನಾಲಜೀಸ್ ನಿರ್ಮಿಸಿರುವ ಡ್ರೋನ್‌ಗಳಿಂದ ಈ
ಕ್ಷಿಪಣಿಯನ್ನು ಉಡಾಯಿಸಲಾಗಿದೆ. ಈ ಕುರಿತ ವೀಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಕ್ಷಣ ಸಚಿವ ರಾಜನಾಥ್ ಸಿಂಗ್ ಈ ಅದ್ಭುತ ಸಾಧನೆಗಾಗಿ ಕ್ಷಿಪಣಿ ಅಭಿವೃದ್ಧಿಯಲ್ಲಿ ಭಾಗಿಯಾದವರನ್ನು ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 