ಅಂತರರಾಷ್ಟ್ರೀಯ

ಶಾಂಘೈನಲ್ಲಿ ಶೋಚನೀಯ ಸ್ಥಿತಿ; ಸ್ಥಳೀಯರು- ಪೊಲೀಸರ ನಡುವೆ ಜಗಳ

ಶಾಂಘೈನಲ್ಲಿ ಶೋಚನೀಯ ಸ್ಥಿತಿ; ಸ್ಥಳೀಯರು- ಪೊಲೀಸರ ನಡುವೆ ಜಗಳ

ಶಾಂಘೈ: ಏಪ್ರಿಲ್ 15: ಚೀನಾದ ಶಾಂಘೈ ಕೊರೊನಾ ಕೂಪವಾಗ್ತಿದೆ. ದಿನೇ ದಿನೇ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಲಾಕ್ ಡಾನ್ ನಿಂದ ಕಂಗೆಟ್ಟಿರೋ ಶಾಂಘೈ ನಿವಾಸಿಗಳಿಗೆ ಮತ್ತೊಂದು ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಶಾಂಘೈ ನಿವಾಸಿಗಳು ತಮ್ಮ ಮನೆಗಳನ್ನು ಕೋವಿಡ್ -19 ರೋಗಿಗಳ ಕ್ವಾರಂಟೈನ್ ಗೆ ಒಪ್ಪಿಸುವಂತೆ ಪೊಲೀಸರು ಆದೇಶಿಸಿದ್ದು ನಿವಾಸಿಗಳು ಪೊಲೀಸರೊಂದಿಗೆ ಜಗಳವಾಡಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಹರಿದಾಡ್ತಿದ್ದು, ಶಾಂಘೈ ಸ್ಥಿತಿಗೆ ಕನ್ನಡಿ ಹಿಡಿದಿವೆ.

2 ವರ್ಷದ ಹಿಂದೆ ವುಹಾನ್ ನಲ್ಲಿ ಕೋವಿಡ್ ವೈರಸ್ ಕಾಣಿಸಿಕೊಂಡ ಬಳಿಕ ಇದೀಗ 25 ಮಿಲಿಯನ್ ಜನಸಂಖ್ಯೆ ಹೊಂದಿರುವ, ಚೀನಾದ ಆರ್ಥಿಕ ವ್ಯವಹಾರದ ಪ್ರಮುಖ ದೊಡ್ಡ ನಗರ ಶಾಂಘೈ ನರಳುತ್ತಿದೆ. ಏಪ್ರಿಲ್ ಆರಂಭದಿಂದ ಲಾಕ್ ಡೌನ್ ವಿಧಿಸಿದ್ದು ಜನ ಮನೆಯಿಂದ ಹೊರಬರಲಾರದೇ ಕಿರುಚುತ್ತಿದ್ದಾರೆ.ಆಹಾರ, ಮೂಲಭೂತ ಸೌಕರ್ಯಗಳಿಲ್ಲದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕು ವರದಿಯಾಗ್ತಿದ್ದು ಅಧಿಕಾರಿಗಳು ರೋಗಿಗಳ ಕ್ವಾರಂಟೈನ್ ಸೆಂಟರ್ ಗಾಗಿ ಹಾಸಿಗೆಗಳುಳ್ಳ ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕಾಗಿ ಪರದಾಡ್ತಿದ್ದಾರೆ.

ಕ್ವಾರಂಟೈನ್ ಸೆಂಟರ್ ಗಳಿಗಾಗಿ ಮನೆಯನ್ನ ಬಿಟ್ಟುಕೊಡುವಂತೆ ನಿವಾಸಿಗಳಿಗೆ ಸೂಚಿಸ್ತಿದ್ದು, ನಿವಾಸಿಗಳು ಪೊಲೀಸರ ವಿರುದ್ಧ ಜಗಳಕ್ಕಿಳುತ್ತಿದ್ದಾರೆ.


ಸುದ್ದಿ ಓದಿ