ಶಿರಹಟ್ಟಿ

2 ರೂಪಾಯಿ ಕಡಿತಗೊಳಿಸಿದ ಹಾಲು ಒಕ್ಕೂಟ: ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಆಕ್ರೋಶ

2 ರೂಪಾಯಿ ಕಡಿತಗೊಳಿಸಿದ ಹಾಲು ಒಕ್ಕೂಟ: ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಆಕ್ರೋಶ

ಶಿರಹಟ್ಟಿ: ರಾಜ್ಯ ಸಕರ್ಾರ ರಾಜ್ಯದಲ್ಲಿನ ಬಹುತೇಕ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ಈಗಾಗಲೇ ಸಾಕಷ್ಟು ಮಳೆ ಇಲ್ಲದ ಕಾರಣ ಬರಗಾಲದ ಭೀತಿಯನ್ನು ಎದುರಿಸುತ್ತಿರುವ ರೈತ ಸಮೂಹ ತಮ್ಮ ದನುಕರುಗಳಿಗೆ ನೀರು, ಮೇವು ಇಲ್ಲದೆ ಪರದಾಡುವ ಪರಿಸ್ಥಿತಿಯಲ್ಲಿ ಹಠಾತ್ತನೇ ಧಾರವಾಡ ಹಾಲು ಒಕ್ಕೂಟ ಆಡಳಿತ ಮಂಡಳಿಯಿಂದ ರೈತರಿಗೆ ಸಿಗುವ ಎರಡು ರೂಪಾಯಿಗಳನ್ನ ಕಡಿತಗೊಳಿಸಿರುವುದು ರೈತರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ ಎಂದು ಶಿರಹಟ್ಟಿ ಹಾಲು ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಹಾಗೂ ಎಸ್.ವಿ ಪಾಟೀಲ್ ಧಾರವಾಡ ಕೆಎಂಎಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದಶರ್ಿಗಳ ಸಭೆಯಲ್ಲಿ ಮಾತನಾಡಿ, ಅಖಂಡ ಶಿರಹಟ್ಟಿ ತಾಲೂಕಿನಲ್ಲಿರುವ ಒಟ್ಟು 44 ಹಾಲು ಉತ್ಪಾದಕರ ಒಕ್ಕೂಟ ಸಂಘಗಳಿಂದ ಪ್ರತಿದಿನ ಸುಮಾರು 13 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತದೆ. ಅಕ್ಟೋಬರ್ 21ರಿಂದ ಜಾರಿಗೆ ಬರುವಂತೆ ಎರಡು ರೂಪಾಯಿ ಕಡಿಮೆ ಮಾಡಿರುವ ಧಾರವಾಡ ಹಾಲು ಒಕ್ಕೂಟ ಆಡಳಿತ ಮಂಡಳಿಯ ನಿಧರ್ಾರದಿಂದ ಪ್ರತಿದಿನ ರೈತರಿಗೆ ಸಿಗಬೇಕಾದ ಸುಮಾರು 25 ರಿಂದ 26 ಸಾವಿರ ರೂಪಾಯಿಗಳ ಕಡಿತ ಮಾಡಿದ್ದಾರೆ, ಇದರಿಂದ ಹಾಲು ಉತ್ಪಾದಕರಿಗೆ ದೊಡ್ಡ ನಷ್ಟ ಉಂಟಾಗಿದೆ. ಧಾರವಾಡ ಕೆಎಂಎಫ್ ಇದನ್ನು ತಕ್ಷಣ ಮರುಪರಿಶೀಲನೆ ಮಾಡಿ ಎರಡು ರೂಪಾಯಿ ದರವನ್ನು ಜಾಸ್ತಿ ಮಾಡಬೇಕೆಂದು ಹೇಳಿದರು.

ಕಳೆದ ಎರಡು ತಿಂಗಳಿಂದ ನೀಡುತ್ತಾ ಬಂದಿದ್ದ ಎರಡು ರೂಪಾಯಿಗಳಿಗೂ ಇದೀಗ ಮಂಡಳಿಯವರು ಕತ್ತರಿ ಹಾಕಿರುವುದು ಹೈನುಗಾರಿಕೆ ಮೇಲೆ ಅವಲಂಬಿತವಾಗಿರುವ ರೈತರ ಗಾಯದ ಮೇಲೆ ಬರೆ ಎಳೆದಿದೆ. ಜೊತೆಗೆ ಪಶು ಆಹಾರದ ದರವನ್ನು ಕ್ವಿಂಟಲ್ಗೆ 120 ರೂಪಾಯಿ ಏರಿಕೆ ಮಾಡಿದ್ದಾರೆ. ಧಾರವಾಡ ಹಾಲು ಒಕ್ಕೂಟದ ಮಂಡಳಿಯಿಂದ ರೈತರಿಗೆ ಬರಬೇಕಾದ ಎರಡು ರೂಪಾಯಿ ಕಡಿತದ ಆದೇಶವನ್ನು ಹಿಂಪಡೆದು ಏಳು ದಿನಗಳ ಒಳಗೆ ಸಕರ್ಾರದ ಆದೇಶದಂತೆ ಮೂರು ರೂಪಾಯಿಯನ್ನು ಉತ್ಪಾದಕರಿಗೆ ನೀಡುವುದರ ಜೊತೆಗೆ ಪಶು ಆಹಾರವನ್ನು ಇಳಿಸಬೇಕು ಎಂದು ಆಗ್ರಹಿಸಿದರು.

ಸುರೇಶ ವರವಿ, ನಿರ್ಮಲ ಅಂದಾನಿ, ಗೀತಾ ಬಡಿಗೇರ, ಹೇಮ ಹಾವೇರಿ, ಮಹದೇವಿ ತಿಮ್ಮಾಪುರ, ರೇಣುಕಾ ಬನ್ನಿ, ನಾಗನಗೌಡ ಪಾಟೀಲ, ಚಂದ್ರಕಾಂತ ಉಳ್ಳಾಗಡ್ಡಿ ಇನ್ನೂ ಅನೇಕರು ಉಪಸ್ಥಿತರಿದ್ದರು 

ಸುದ್ದಿ ಓದಿ