ಬೆಲ್ಜಿಯಂ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಅನಾಹುತ
ಬ್ರಸೆಲ್ಸ್, ಜುಲೈ 23: ಬೆಲ್ಜಿಯಂನ ಲೀಜ್ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಬಾರಿ ಪ್ರಮಾಣದ ವಸ್ತು ನಾಶವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಈ ಘಟನೆಯಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ ಏರೋ ಸರ್ವಿಸಸ್ ಕಂಪನಿಯ ಹ್ಯಾಂಗರ್‌ನಲ್ಲಿ ಬುಧವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಟೆಲಿ ಲೀಜ್ ಬ್ರಾಡ್‌ಕಾಸ್ಟರ್ ವರದಿ ಮಾಡಿದೆ.
ಘಟನೆಯ ನಂತರ ವಿಮಾನ ನಿಲ್ದಾಣದ ವಕ್ತಾರ ಕ್ರಿಶ್ಚಿಯನ್ ಡೆಲ್‌ಕೋರ್ಟ್ ಪ್ರಕಾರ, ಮೂರು ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ಹೋಗುವಂತೆ ನಿರ್ದೇಶಿಸಲಾಗಿದೆ. ಎಲ್ಲಾ ಅಗ್ನಿಶಾಮಕ ದಳದವರು ಹ್ಯಾಂಗರ್‌ನಲ್ಲಿ ಬೆಂಕಿಯನ್ನು ನಿಭಾಯಿಸುತ್ತಿದ್ದಂತೆ, ಪೈಲಟ್‌ಗಳಿಗೆ ಲೀಜ್‌ನಲ್ಲಿ ಇಳಿಯಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ಅವಕಾಶ ನೀಡಲಾಯಿತು.ಬೆಂಕಿಯ ನಂತರ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ವಿಮಾನ ನಿಲ್ದಾಣವು ನಂತರ ದೃಡಪಡಿಸಿದೆ. ಭಾರಿ ಪ್ರಮಾಣದ ವಸ್ತುಗಳಿಗೆ ಹಾನಿಯಾಗಿದೆ.