ಸೌಂದತ್ತಿ

ಮಾ. 13 ರಂದು ಮಹಾರಥೋತ್ಸವ, ಸಾಮೂಹಿಕ ವಿವಾಹ

ಮಾ. 13 ರಂದು ಮಹಾರಥೋತ್ಸವ, ಸಾಮೂಹಿಕ ವಿವಾಹ

ಸವದತ್ತಿ 10: ಸಮೀಪದ ಮದ್ಲೂರ ಗ್ರಾಮದಲ್ಲಿ ಕಲ್ಮೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ. 12 ರಂದು ಬೆಳಿಗ್ಗೆ ಕಲ್ಮೇಶ್ವರ ವಿಗ್ರಹದೊಂದಿಗೆ ಪಲ್ಲಕ್ಕಿ ಉತ್ಸವ ನಂತರ 10.30 ಕ್ಕೆ ಸಾಮೂಹಿಕ ವಿವಾಹಗಳು ಜರಗುವವು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಮಹಾಸ್ವಾಮೀಜಿ, ಸವದತ್ತಿ ಬ್ರಹ್ಮಾನಂದ ಆಶ್ರಮದ ಶಿವಾನಂದ ಮಹಾಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಇಂಚಗೇರಿಮಠದ ಸ.ಸ. ಪ್ರಭು ಮಹಾರಾಜರು ವಹಿಸುವರು. ಸಮ್ಮುಖವನ್ನು ಮದ್ಲೂರ ಆನಿಮಾನಂದ ಆಶ್ರಮದ ಪ್ರಮೀಳಾ ಸಿಸ್ಟರ್, ಭೀಮಾನಂದ ಸ್ವಾಮೀಜಿ ಪತ್ರಯ್ಯ ಹಿರೇಮಠ, ಬಸಯ್ಯಸ್ವಾಮಿ ಪೂಜೇರ ವಹಿಸುವರು. ಸಂಜೆ : 4  ಗಂಟೆಗೆ ಕಲ್ಮೇಶ್ವರ ಮಹಾರಥೋತ್ಸವ ಜರುಗುವುದು. ರಾತ್ರಿ : 10  ಗಂಟೆಗೆ ನಾಟಕ ಮರಳಿ ಮಿಂಚಿದ ಮುತೈದೆ ಪ್ರದರ್ಶನಗೊಳ್ಳುವುದು.

ಮಾ. 11 ರಂದು ರುದ್ರಾಭಷೇಕ, ಕಳಸಾರೋಹಣ, ಭಜನೆ,ಡೊಳ್ಳಿನ ಪದಗಳು ಸೇರಿದಂತೆ ಶಶಿಕಾಂತ ಪಡಸಲಗಿ ಇವರಿಂದ ಪ್ರವಚನ ಜರುಗುವುದು ಎಂದು ಜಾತ್ರಾ ಕಮಿಟಿ ತಿಳಿಸಿದೆ.


ಸುದ್ದಿ ಓದಿ