ಅಂತರರಾಷ್ಟ್ರೀಯ

ಸಾಮೂಹಿಕ ಗುಂಡಿನ ದಾಳಿ: ಅಮೆರಿಕದಲ್ಲಿ ಬಂದೂಕು ಖರೀದಿ ವಯಸ್ಸು ಹೆಚ್ಚಳ

ಸಾಮೂಹಿಕ ಗುಂಡಿನ ದಾಳಿ: ಅಮೆರಿಕದಲ್ಲಿ ಬಂದೂಕು ಖರೀದಿ ವಯಸ್ಸು ಹೆಚ್ಚಳ

ವಾಷಿಂಗ್ಟನ್: ಜೂನ್ 09 : ಅಮೆರಿಕದ ಕಾಂಗ್ರೆಸ್‌ನ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್, ಗನ್ ಖರೀದಿಯ ವಯಸ್ಸನ್ನು ಹೆಚ್ಚಿಸಲು ನಿರ್ಧರಿಸಿದೆ.

ಅಮೆರಿಕದಲ್ಲಿ ಕಳೆದ ಹಲವು ದಿನಗಳಿಂದ ಸಾಮೂಹಿಕ ದಾಳಿಗಳು ನಡೆಯುತ್ತಿದ್ದು, ಇದರಿಂದ ಅಮೆರಿಕ ಅಧ್ಯಕ್ಷ ಬಿಡೆನ್ ನೇತೃತ್ವದ ಸರಕಾರಕ್ಕೆ ತೀವ್ರ ಮುಖಭಂಗ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿಯಲ್ಲಿ ಬಂದೂಕಗಳ ಬಳಕೆ, ಗನ್ ಖರೀದಿ ವಯಸ್ಸಿನ ಹೆಚ್ಚಳ ಹಾಗೂ ನಿಖರ ಸ್ಥಳಗಳಲ್ಲಿ ಬಂದೂಕುಗಳನ್ನು ಸುರಕ್ಷಿತವಾಗಿಡುವುದು ಸೇರಿದಂತೆ ಹಲವು ಇತರ ಕ್ರಮಗಳನ್ನು ಉತ್ತೇಜಿಸಲು ಮಸೂದೆಯನ್ನು ಅಂಗೀಕರಿಸಲಾಗಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯರು ‘ನಮ್ಮ ಮಕ್ಕಳನ್ನು ರಕ್ಷಿಸುವ ಕಾಯಿದೆ’ ಎಂಬ ಕಾನೂನಿನ ಪರವಾಗಿ ಮತ ಚಲಾಯಿಸಿದರು ಮತ್ತು ಅದನ್ನು ಅಂಗೀಕರಿಸಿದರು.

ಮಸೂದೆಯ ಪ್ರಕಾರ, ಈ ಕಾನೂನಿನ ಉದ್ದೇಶವು ಬಂದೂಕು ಖರೀದಿಗೆ ವಯಸ್ಸಿನ ಮಿತಿಯನ್ನು ಹೆಚ್ಚಿಸುವುದು, ಬಂದೂಕುಗಳ ಕಳ್ಳಸಾಗಣೆ ತಡೆಯುವುದು, ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವುದು ಮತ್ತು ಶಸ್ತ್ರಾಸ್ತ್ರಗಳನ್ನು ಸುರಕ್ಷಿತ ರೀತಿಯಲ್ಲಿ ಇರಿಸಲು ಕ್ರಮಗಳನ್ನು ಉತ್ತೇಜಿಸುವುದಾಗಿದೆ. ಹೆಚ್ಚಿನ ಕ್ಯಾಲಿಬರ್ ಹೊಂದಿರುವ ಮ್ಯಾಗಜಿನ್ ಗಳನ್ನು ನಿಷೇಧಿಸುವುದು ಹಾಗೂ ಅವುಗಳ ಖರೀದಿಗೆ ವಯಸ್ಸಿನ ಮಿತಿಯನ್ನು ಹೆಚ್ಚಿಸಲು ಮಸೂದೆಯು ಪ್ರಯತ್ನಿಸಲಿದೆ.

ಉವಾಲ್ಡೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರ ಸಾವಿಗೀಡಾಗಿದ್ದರು. ಈ ದುರಂತ ಅಮೆರಿಕದ ನಾಗರಿಕರಲ್ಲಿ ತೀವ್ರ ಕಳವಳ ಉಂಟು ಮಾಡಿತ್ತು. ಮಸೂದೆಯಲ್ಲಿ ಅಂಗೀಕರಿಸುವಂತೆ ಗನ್ ಖರೀದಿ ವಯಸ್ಸನ್ನು 18ರಿಂದ 21ಕ್ಕೆ ಏರಿಸಲಾಗಿದೆ.

ಸುದ್ದಿ ಓದಿ