ಮುಂಡರಗಿ

12ರಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೊಡ್ಡಮನಿ ರಾಜೀನಾಮೆ: ಎಎಪಿ ಸೇರ್ಪಡೆ

12ರಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೊಡ್ಡಮನಿ ರಾಜೀನಾಮೆ:  ಎಎಪಿ ಸೇರ್ಪಡೆ


ಲೋಕದರ್ಶನ ವರದಿ 

ಮುಂಡರಗಿ 08:  ಬಿಜೆಪಿ ಮಾದ್ಯಮ ತಾಲೂಕ ವಕ್ತಾರ, ಬಿಜೆಪಿ ಯುವ ನಾಯಕನಾಗಿ ಕೆಲಸ ಮಾಡಿದ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಮುಂಡರಗಿ ಮಂಡಲ ಬಿಜೆಪಿ ಅಧ್ಯಕ್ಷ ಹೇಮಗೀರೀಶ ಹಾವಿನಾಳ ಅವರಿಗೆ ಸಲ್ಲಿಸಲಾಗಿದೆ ಎಂದು ಮುಂಡರಗಿ ಮಂಡಲ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೊಡ್ಡಮನಿ ಹೇಳಿದರು. 

    ಪಟ್ಟಣದಲ್ಲಿ ಶುಕ್ರವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ ಅವರ ನೇತೃತ್ವ ಆಮ್ ಆದ್ಮಿ ಪಾರ್ಟಿಯ ಯೋಜನೆ, ಉತ್ತಮ ವಿಚಾರಗಳು, ಪಕ್ಷದ ಸೌಲಭ್ಯಗಳು ಜನತೆಗೆ ಅವಶ್ಯಕವಾಗಿವೆ. ಶಿರಹಟ್ಟಿ ಕ್ಷೇತ್ರದಲ್ಲಿ ಎಎಪಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ನಾನು ಎಎಪಿ ಸೇರುವುದಾಗಿ ತಿಳಿಸಿದರು. 

  ಸುಭಾಸ ಕುಂಬಾರ ಮಾತನಾಡಿ, ತಾವೂ ಬಿಜೆಪಿ ರಾಜೀನಾಮೆ ಸಲ್ಲಿಸಿದ್ದು. ನಾವು ಬಿಜೆಪಿ ಪಕ್ಷದಲ್ಲಿ ಸುಮಾರು ವರ್ಷಗಳಿಂದಲೂ ಕೆಲಸ ಮಾಡುತ್ತಾ ಬಂದಿದ್ದೇವೆ. ಆದರೆ ಪಕ್ಷದ ಆಡಳಿತ ವೈಫಲ್ಯದಿಂದ ಇಲ್ಲಿಯವರೆಗೂ ಯಾವುದೇ ಅಭಿವೃದ್ದಿ ಕೆಲಸಗಳು ಆಗದೇ ಇರುವುದು ಬೇಸರದ ಸಂಗತಿ ಎಂದು ಹೇಳಿದರು. 

    ವಕೀಲರು, ಅಶೋಕ ಉಳ್ಳಾಗಡ್ಡಿ ಮಾತನಾಡಿ, ಬಿಜೆಪಿಯಲ್ಲಿ ಪ್ರಣಾಳಿಕೆಗಳು ಬಡವರ ಪರವಾಗಿಲ್ಲ, ಪುರಸಭೆಯಲ್ಲಿ ಬಿಜೆಪಿ ಆಡಳಿತ ವಿಫಲಗೊಂಡಿದೆ. ಬೃಷ್ಟಾಚಾರ ತಾಂಡವಾಗಿದೆ. ಹೀಗಾಗಿ ಪರಾ​‍್ಯಯ ಪಕ್ಷ ಎಎಪಿ ಪಕ್ಷದ ಆಡಳಿತದ ಅವಶ್ಯಕತೆ ಇದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದರು. 

ಮುಂಡರಗಿಯಲ್ಲಿ ಏ.12 ರಂದು ಮಂಗಳವಾರ ಬೆಳಿಗ್ಗೆ 9 ಕ್ಕೆ ಕೋಟೆಭಾಗದ ಹನಮಂತ ದೇವಸ್ಥಾನದ ಹತ್ತಿರ ವಿವಿಧ ಪಕ್ಷಗಳ ಕಾರ್ಯಕರ್ತರು ಎಎಪಿ ಸೇರಲಿದ್ದಾರೆ. 200ಕ್ಕೂ ಹೆಚ್ಚು ಯುವಪಡೆ ಪಕ್ಷವನ್ನು ರಾಜ್ಯ ಸಹ ಸಂಚಾಲಕ ವಿಜಯ ಶರ್ಮಾ ನೇತೃತ್ವದಲ್ಲಿ ಎಎಪಿ ಸೇರೆ​‍್ಡಗೊಳ್ಳಲಿದ್ದಾರೆಂದು ಮಲ್ಲಿಕಾರ್ಜುನ ದೊಡ್ಡಮನಿ ತಿಳಿಸಿದರು. ಪಕ್ಷಕ್ಕೆ ಸೇರೆ​‍್ಡಗೊಳ್ಳುವರು ಸಂಪರ್ಕಿಸಲು ತಿಳಿಸಿದ್ದಾರೆ. 

    ಈ ವೇಳೆ ಎಸ್‌.ಎಚ್‌.ಕಲಕೇರಿ, ಉಮೇಶ ಜೋಳದ, ವಾಲ್ಮೀಕಿ ಸಮಾಜ ಮುಖಂಡ ಮಾರುತಿ ಜಾಲಿಹಾಳ, ಭೀಮಣ್ಣ ಕೊರ್ಲಹಳ್ಳಿ ಹಾಗೂ ಮೊದಲಾದವರು ಇದ್ದರು. 


ಸುದ್ದಿ ಓದಿ