ಮಹರ್ಷಿ ವಾಲ್ಮೀಕಿ ಇತಿಹಾಸಕ್ಕೆ ನೀಡಿದ ಕೊಡುಗೆ ಅಮೂಲ್ಯವಾದುದು : ಡಾ. ಚಂದ್ರು ಲಮಾಣಿ
ಶಿರಹಟ್ಟಿ 18: ಉನ್ನತ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸಿರುವ ಮಹರ್ಷಿ ವಾಲ್ಮೀಕಿ ಅವರು ಭಾರತೀಯ ಇತಿಹಾಸಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬರ ಮನ ಪರಿವರ್ತನೆ, ಗುಣ ಮತ್ತು ಸಾಧನೆಯಲ್ಲಿ ಬದಲಾವಣೆ ತರಲು ಮಹರ್ಷಿ ವಾಲ್ಮೀಕಿ ಅವರು ಮಹಾನ ವ್ಯಕ್ತಿಯಾಗಿದ್ದಾರೆ, ವಾಲ್ಮೀಕಿ ಜಯಂತ್ಯೋತ್ಸವ ಕೇವಲ ಆಚರಣೆಗೆ ಮೀಸಲಾಗಬಾರದು. ಅವರ ತತ್ವ ಸಿದ್ದಾಂತಗಳನ್ನು ನಾವೆಲ್ಲರು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ತಾಲೂಕ ಆಡಳಿತ, ತಾಲೂಕ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯತ ಹಾಗೂ ಶಿರಹಟ್ಟಿ ತಾಲೂಕ ಮಹರ್ಷಿ ವಾಲ್ಮೀಕಿ ಸಂಘ ಇವರುಗಳ ಸಂಯುಕ್ತ ಅಶ್ರಯದಲ್ಲಿ ಶಿರಹಟ್ಟಿಯ ಶ್ರೀ ವಾಲ್ಮೀಕಿ ಭವನದಲ್ಲಿ ಆಚರಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಮುದಾಯದ ಅಭಿವೃದ್ದಿಗೆ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಸಮಾಜದ ಯುವ ಪೀಳಿಗೆಯನ್ನು ವಿದ್ಯಾವಂತರನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಈಗಾಗಲೆ ಹಲವು ಕಡೆಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನವನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಚಿಕ್ಕದಾದ ಗ್ರಂಥಾಲಯವನ್ನು ನಿರ್ಮಾಣ ಮಾಡುವುದು ಮತ್ತು ಅದರಲ್ಲಿ ಮಹರ್ಷಿ ವಾಲ್ಮೀಕಿಯವರ ಕುರಿತು ಪಠಣ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಇದರಿಂದ ಯುವ ಪಿಳಿಗೆಗೆ ಜ್ಞಾನಾರ್ಜನೆಗೆ ಸಾಕಷ್ಟು ಅವಕಾಶವಾಗಲಿದೆ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಬೆಳ್ಳಟ್ಟಿ ಶ್ರೀ ಯೋಗಿ ವೇಮನ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಅಂಜನೇಯ ತಿರಕಪ್ಪ ಹೆಡಿಯಾಲ ಮಾತನಾಡಿ, ಮುಖ್ಯ ಅತಿಥಿಗಳಾಗಿ ಶಿರಹಟ್ಟಿ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಗೋವಿಂದಪ್ಪ ಬಾಗೇವಾಡಿ, ತಹಶೀಲ್ದಾರ ಅನೀಲ ಬಡಿಗೇರ. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕಲ್ಮನಿ, ಸಾಮಾಜಿಕ ಅರಣ್ಯ ಇಲಾಖೆಯ ಆರ್.ಎಫ್.ಓ ಕೌಶಿಕ ದಳವಾಯಿ, ಪ್ರಾದೇಶಿಕ ಅರಣ್ಯ ಇಲಾಖೆಯ ಆರ್.ಎಫ್.ಓ ರಾಮಪ್ಪ ಪೂಜಾರ, ಬಿಇಒ ನಾಯಕ, ಮಂಜುನಾಥ ಘಂಟಿ, ನಾಗರಾಜ ಲಕ್ಕುಂಡಿ, ದೇವಪ್ಪ ಆಡೂರ, ಬಸವರಾಜ ಡೊಂಕಬಳ್ಳಿ, ಲಕ್ಷ್ಮಣ ಬಾರಬಾರ, ವಾಲ್ಮೀಕಿ ಸಮಾಜದ ಮುಖಂಡ ಸಣ್ಣವೀರ್ಪ ಹಳೆಪ್ಪನವರ, ಶಿವನಗೌಡ ಪಾಟೀಲ, ಮಂಜುನಾಥ ಶಂಕಿನದಾಸರ, ಬಸನಗೌಡ ಪಾಟೀಲ, ಬಸಣ್ಣ ನಾಯ್ಕರ, ವೀರೇಶ ತಂಗೋಡ, ಬಸವರಾಜ ವಡವಿ, ಅಕ್ಬರಸಾಬ ಯಾದಗೀರಿ, ಎಂ ಕೆ ಲಮಾಣಿ, ಬಿ ಎನ್ ರಾಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಣ್ಣ ಸಂಕನೂರ, ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಿದ್ದರಾಮ ಕಟ್ಟಿಮನಿ ಮತ್ತಿತರರು ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಪ್ರಭಾರ) ಮುತ್ತಣ್ಣ ಎಸ್ ಸಂಕನೂರ ಸ್ವಾಗತಿಸಿದರು. ಎಸ್ ವಿ ಬಟ್ಟೂರ ಕಾರ್ಯಕ್ರಮ ನಿರೂಪಿಸಿದರು.